ಕೋಲಾರ –
ವಿದ್ಯಾರ್ಥಿ ನಿಯೊಬ್ಬಳಿಗೆ ಅಶ್ಲೀಲ ಸಂದೇಶ ಕಳಿಸಿದ ಆರೋಪದ ಮೇಲೆ ಶಿಕ್ಷಕರೊಬ್ಬರನ್ನು ಅಮಾನತು ಮಾಡಿರುವ ಘಟನೆ ಕೋಲಾರ ದಲ್ಲಿ ನಡೆದಿದೆ.ವಿದ್ಯಾರ್ಥಿನಿಗೆ ಪ್ರಶ್ನೆ ಕೇಳಿ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ್ದ ಆರೋಪದ ಮೇಲೆ ತಾಲೂಕಿನ ನರಸಾಪುರದ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು ಹಾಗೂ ಪೋಷಕರು ಧರ್ಮದೇಟು ನೀಡಿದ್ದರು.
ಪ್ರೌಢಶಾಲೆಯ ಕನ್ನಡ ಸಹಶಿಕ್ಷಕ ಸಿ.ಎಂ.ಪ್ರಕಾಶ್ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ ಅಮಾನತುಗೊ ಳಿಸಿದ್ದಾರೆ.ಕೋಲಾರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾ ಧಿಕಾರಿ (ಬಿಇಒ) ಕನ್ನಯ್ಯ ಶಾಲೆಗೆ ಭೇಟಿ ನೀಡಿ ಗ್ರಾಮಸ್ಥರು, ಪೋಷಕರು ಹಾಗೂ ಮಕ್ಕಳಿಂದ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿ ಪ್ರಾಥಮಿಕ ವಿಚಾರಣೆ ನಡೆಸಿ ಡಿಡಿಪಿಐಗೆ ವರದಿ ನೀಡಿದ್ದರು.
10ನೇ ತರಗತಿಯ ವಿದ್ಯಾರ್ಥಿನಿಯೊಬ್ಬರಿಗೆ ವಾಟ್ಸ್ ಆಪ್ ನಲ್ಲಿ ಏನು ಮಾಡುತ್ತಿದ್ದೀಯಾ ಎಲ್ಲಿದ್ದೀಯಾ ಚೆನ್ನಾಗಿ ಎಂಜಾಯ್ ಮಾಡು ಎನ್ನುತ್ತಾ ಸಂದೇಶ ಕಳುಹಿಸಿದ್ದರು ಅದಲ್ಲದೆ ಹನಿಮೂನ್ ಅರ್ಥ ಗೊತ್ತಾ ಎಂದು ಕೇಳಿದ್ದಾರೆ ನ್ನಲಾಗಿದೆ ಜೊತೆಗೆ ಮೈಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ಬಗ್ಗೆ ದೂರುಗಳು ಬಂದಿದ್ದವು. ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡು ಬರೆದು ಕೊಟ್ಟಿದ್ದಾರೆ.
ಶಾಲೆ ಬಳಿ ಬಂದು ಪೋಷಕರು ಹಾಗೂ ಗ್ರಾಮಸ್ಥರು ಬಿಇಒ ಎದುರೇ ಶಿಕ್ಷಕನಿಗೆ ತರಾಟೆ ತೆಗೆದುಕೊಂಡಿದ್ದರು.ಈ ಶಿಕ್ಷಕ ಈ ಹಿಂದೆ ಕಾರ್ಯ ನಿರ್ವಹಿಸಿದ ಸ್ಥಳಗಳಲ್ಲಿಯೂ ಅನುಚಿತವಾಗಿ ವರ್ತಿಸಿ ಅಮಾನತುಗೊಂಡಿದ್ದರು ಎಂಬುದು ತಿಳಿದುಬಂದಿದ್ದು ಸಧ್ಯ ಮತ್ತೆ ಅಮಾನತು ಗೊಂಡಿದ್ದು ಇಲಾಖೆಯ ವಿಚಾರಣೆ ಮಾಡಿ ಮುಂದೆ ಏನು ಮಾಡತಾರೆ ಎಂಬೊಂದನ್ನು ಕಾದು ನೋಡಬೇಕು.
ಸುದ್ದಿ ಸಂತೆ ನ್ಯೂಸ್ ಕೋಲಾರ…..