ತಿದ್ದಪಡಿಯಾಯಿತು ಶಿಕ್ಷಕರ ನೇಮಕಾತಿ ಕಾಯಿದೆ ಹೆಚ್ಚಳ ವಾಯಿತು ವಯೋಮಿತಿ ಚರ್ಚೆಗೆ ಬರಲೇ ಇಲ್ಲ ಸ್ವಂತ ಜಿಲ್ಲೆಯ ವರ್ಗಾವಣೆ ವಿಚಾರ…..

Suddi Sante Desk

ಬೆಂಗಳೂರು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಡಿಯಲ್ಲಿ ನಡೆಸುವ ಶಿಕ್ಷಕರ ನೇಮಕ ಕಾಯಿದೆಗೆ ರಾಜ್ಯ ಸರಕಾರ ತಿದ್ದುಪಡಿ ತಂದಿದೆ.ಹೌದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಪರಿಶಿಷ್ಟ ಜಾತಿ, ಪಂಗಡ,ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಹಾಲಿ ಇರುವ ವಯೋಮಿತಿಯನ್ನು ಮತ್ತೆ ಎರಡು ವರ್ಷ ಹೆಚ್ಚಳ ಮಾಡಲಾಗಿದೆ.

ಪರಿಶಿಷ್ಟ ಜಾತಿ,ವರ್ಗಕ್ಕೆ 47 ವರ್ಷ,ಹಿಂದುಳಿದ ವರ್ಗಕ್ಕೆ 45 ವರ್ಷ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 42 ವರ್ಷದವರೆಗೆ ಶಿಕ್ಷಕರ ನೇಮಕ ಪರೀಕ್ಷೆ ಬರೆಯುವುದಕ್ಕೆ ಇನ್ನು ಮುಂದೆ ಅವಕಾಶ ಲಭ್ಯವಾಗಲಿದೆ

ಸುಮಾರು 15000 ಶಿಕ್ಷಕರ ನೇಮಕ ಮಾಡಿಕೊಳ್ಳುವುದಕ್ಕೆ ಸರಕಾರ‌ ಮತ್ತೆ ಸಿದ್ಧತೆ ಮಾಡಿಕೊಳ್ಳುತ್ತಿದೆ.ಆದರೆ ನಿಗದಿತ ಅಂಕ ಪಡೆಯದ ಕಾರಣಕ್ಕೆ ನೇಮಕ ಪೂರ್ತಿಯಾಗಿಲ್ಲ. ಒಂದೆಡೆ ಹುದ್ದೆ ಖಾಲಿ ಇದ್ದರೆ ಇನ್ನೊಂದೆಡೆ ಅಭ್ಯರ್ಥಿಗಳ ವಯೋಮಿತಿ ಹೆಚ್ಚಿದೆ.ಈ ಹಿನ್ನೆಲೆಯಲ್ಲಿ ನಿಯಮಕ್ಕೆ ತಿದ್ದು ಪಡಿ ಮಾಡಲಾಗಿದೆ.ಜೊತೆಗೆ ಕಟ್ ಆಫ್ ಮಾರ್ಕ್ಸ್ ಪ್ರಮಾಣವನ್ನು ಶೇ.60ರಿಂದ ಶೇ.50ಕ್ಕೆ ಇಳಿಕೆ ಮಾಡಲಾ ಗಿದೆ.ಪ್ರಾಥಮಿಕ ಹಾಗೂ ಪ್ರೌಢ ಶಾಲಾ ನೇಮಕಗಳೆರಡ ಕ್ಕೂ ಈ ನಿಯಮ ಅನ್ವಯವಾಗಲಿದೆ ಇನ್ನೂ ಪ್ರಮುಖ ವಾಗಿ ಕಳೆದ ಹಲವಾರು ವರ್ಷಗಳಿಂದ ಎಲ್ಲವನ್ನೂ ತ್ಯಾಗ ಮಾಡಿ ಸೇವೆ ಮಾಡುತ್ತಿರುವ ಶಿಕ್ಷಕರಿಗೆ ಸ್ವಂತ ಜಿಲ್ಲೆಗೆ ವರ್ಗಾವಣೆಯ ವಿಚಾರ ಚರ್ಚೆ ಗೆ ಬರಲೇ ಇಲ್ಲ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.