ಕಲಬುರಗಿ –
ಬಿಇಓ ರೊಬ್ಬರ ಮೇಲೆ ಹಲ್ಲೆ ಮಾಡಿದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನೊಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ ಹೌದು ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿ ಕಾರಿ ಸಿದ್ಧವೀರಯ್ಯ ರುದ್ನೂರ್ ಎಂಬವರಿಗೆ ಮೇಲೆ ಹಲ್ಲೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಚಿತ್ತಾಪುರ ತಾಲೂಕಿನ ದೇವಾಜಿ ನಾಯಕ್ ತಾಂಡಾದ ಸ.ಕಿ.ಪ್ರಾ.ಶಾಲೆಯ ಶಿಕ್ಷಕ ಮಲ್ಲಿನಾಥ ಹಲ್ಲೆ ಮಾಡಿದ ವರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಶಾಲೆಗೆ ಶಿಕ್ಷಕ ಹಾಜರಾಗಿರಲಿಲ್ಲ ಹೀಗಾಗಿ ಇವರ ವೇತನವನ್ನು ಬಿಇಓ ಅವರು ತಡೆ ಹಿಡಿದಿದ್ದರು.ಹೀಗಾಗಿ ಬುಧವಾರ ರಾತ್ರಿ ಬಿಇಒ ಮನೆಗೆ ನುಗ್ಗಿ ಬಕೆಟ್ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳಿಂದ ತಲೆಗೆ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ಮಾಡಿದ ಶಿಕ್ಷಕ ಶಾಲೆಗೆ ಹಾಜರಾಗದೇ ಇರುವ ಕಾರಣ ಸಂಬಳ ತಡೆ ಹಿಡಿಯಲಾಗಿದ್ದು ಇದರಿಂದ ಕುಪಿತ ಗೊಂಡ ಶಿಕ್ಷಕ ಕ್ಷೇತ್ರ ಶಿಕ್ಷಣಾಧಿಕಾರಿ ಮೇಲೆ ಹಲ್ಲೆ ಮಾಡಿ ದ್ದಾರೆ.
https://youtu.be/7txjbhOMMTA
ಇನ್ನೂ ಈ ಒಂದು ಘಟನೆ ಕುರಿತು ಕಲಬುರಗಿ ವಿಶ್ವವಿದ್ಯಾ ಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಲ್ಲೆ ಮಾಡಿದ ಶಿಕ್ಷಕ ಮಲ್ಲಿನಾಥನನ್ನು ಪೊಲೀಸರು ಬಂಧಿಸಿದ್ದಾರೆ.