ಧಾರವಾಡ –
ಅಂದುಕೊಂಡಿದ್ದರೆ ಇವತ್ತು ಎಲ್ಲರೂ ಹುಟ್ಟು ಹಬ್ಬದ ಶುಭಾಶಯಗಳು ಸಾರ್, ಹ್ಯಾಪಿ ಬರ್ಥಡೆ ಸಾರ್, ಅಂತಾ ಎಲ್ಲರೂ ಶುಭಾಶಯ ಹೇಳುತ್ತಿದ್ದರು. ಪ್ರತಿ ಯೊಬ್ಬರು ಆ ಆದರ್ಶ ಶಿಕ್ಷಕ ಪೊಟೊ ಫೇಸ್ ಬುಕ್ ಗೆ ಹಾಕಿ ವಾಟ್ಸ್ ಆಪ್ ಗೆ ಹಾಕುತ್ತಿದ್ದರು ಆದರೆ ಆಗಿ ದ್ದೇ ಬೇರೆ. ಹೌದು ನಿನ್ನೇ ರಾತ್ರಿ ಕುಟುಂಬದವರೊಂ ದಿಗೆ ನಗು ನಗುತ್ತಾ ಬೆಳಿಗ್ಗೆ ಹುಟ್ಟಿದ ಹಬ್ಬ ಇದೆ ಹಾಗೇ ಹೀಗೆ ಮಾಡಬೇಕು ಎಂದುಕೊಂಡು ಮಾತ ನಾಡಿ ಮಲಗಿಕೊಂಡ ಶಿಕ್ಷಕರೊಬ್ಬರು ಬೆಳಗಾಗುತ್ತಲೆ ನಿಧನರಾಗಿದ್ದಾರೆ.
ಎಂಬ ಸುದ್ದಿ ಸುದ್ದಿ ನಂಬಲಾಗುತ್ತಿಲ್ಲ.ಹೌದು ಇಂಥಹ ದೊಂದು ಅಚ್ಚರಿಯ ಸಾವೀನ ಸುದ್ದಿಯೊಂದು ಧಾರವಾಡ ಜಿಲ್ಲೆಯ ಧಾರವಾಡ ತಾಲ್ಲೂಕಿನಲ್ಲಿ ನಡೆ ದಿದೆ.ಶಿಕ್ಷಕ ರವಿ ಗರಗ ಮೃತರಾದ ಶಿಕ್ಷಕರಾಗಿದ್ದಾರೆ. ಹೆಬ್ಬಳ್ಳಿಯಲ್ಲಿ ಶಿಕ್ಷಕರಾಗಿದ್ದ ಇವರು ಕಲಘಟಗಿ ತಾಲೂಕಿನ ಸಿ ಆರ್, ಪಿ ಜೊತೆಗೆ ಕಲಘಟಗಿ ತಾಲೂ ಕಿನ ಟೀಚರ್ಸ ಸೊಸಾಯಿಟಿಯ ಚುನಾಯಿತ ನಿರ್ದೇಶಕರಾಗಿದ್ದರು.
2015 ರಲ್ಲಿ ಅಪ್ನಾ ದೇಶ ಶಿಕ್ಷಕರತ್ನ ರಾಜ್ಯ ಪ್ರಶಸ್ತಿ ಯನ್ನು ಪಡೆದಿದ್ದರು.ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದವರಾಗಿದ್ದರು.ಕಲಾವಿದರ ಮನೆತನ ಇವರ ತಂದೆ ದೇವಣ್ಣ ಖ್ಯಾತ ನಾಟಿ ವೈದ್ಯರಾಗಿದ್ದರು ಇವ ರು ಗ್ರಾಮದ ಎಲ್ಲಾ ಜನರ ಪ್ರೀತಿಗೆ ಪಾತ್ರರಾಗಿದ್ದರು ಇವರ ಸಹೋದರ ಶಶಿ ಅದ್ಬುತ ಕಲೆಗಾರರಾಗಿದ್ದರು. ಮಣ್ಣಿನ ಕುಶಲ ಕಲೆ ತುಂಬಾ ಅದ್ಬುತ ಇವರು ಇಂದು ಹೃದಯ ಕಾಯಿಲೆಯಿಂದ ನಿಧನರಾಗಿದ್ದಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ಈ ನಾಡಿನ ಶಿಕ್ಷಕ ಬಂಧುಗಳು ಕಂಬನಿ ಮಿಡಿದಿದ್ದಾರೆ.
ಅಶೋಕ ಸಜ್ಜನ, ವಿ ವಿ ಆಲೂರ, ಕೆ ಎಂ ಗೆದಗೇರಿ, ಉಮೇಶ ಬೇರುಡಗಿ, ರವಿ ಬಂಗೇನವರ ಯಮನ ಪ್ಪ ಭಗವತಿ, ಮಲ್ಲಿಕಾರ್ಜುನ ಉಪ್ಪಿನ ಎಲ್ ಐ ಲಕ್ಕಮ್ಮನವರ, ಅಶೋಕ ಬಳಿಗೇರ,ಹನುಮಂದ ಬೂದಿಹಾಳ, ಇನ್ನೂ ಗ್ರಾಮದ ಹಿರಿಯರಾದ ತಮ್ಮಾಜಿರಾವ ತಲವಾಯಿ, ಪ್ರಕಾಶ ಕುಂಬಾರ, ಸಿದ್ದಪ್ಪ ಕುಂಬಾರ, ರುದ್ರಪ್ಪ ವಾಲಿ, ಮಲ್ಲಿಕಾರ್ಜುನ ಗಡೆಕಾರ, ಅಶೋಕ ಗಡೇಕಾರ, ಉಮೇಶ ಸಾಲಿ, ನಿಂಗು ಮೊರಬದ ಶರಣಪ್ಪ ಸಾಲಿ, ಹೊನ್ನಪ್ಪ ಲಕ್ಕ ಮ್ಮನವರ,ಚಂದ್ರಶೇಖರ ಶೆಟ್ರು, ನಾರಾಯಣ ಸ್ವಾಮಿ,ಶರಣಬಸವ ಬನ್ನಿಗೋಳ,ಪವಾಡೆಪ್ಪ,ಲತಾ ಮುಳ್ಳೂರು,ಸೇರಿದಂತೆ ಇನ್ನೂ ಅನೇಕರು ಸಂತಾಪ ಸೂಚಿಸಿದ್ದಾರೆ.ಹುಟ್ಟಿದ ದಿನದಂದು ಸಾವಿನ ಸುದ್ದಿ ಯನ್ನ ನೀಡಿ ನೆನಪನ್ನು ಉಳಿಸಿ ಹೋದ ಶಿಕ್ಷಕ ಕುಟುಂಬಕ್ಕೆ ಅವರಿಲ್ಲ ನೋವಿನ ಶಕ್ತಿಯನ್ನು ತಡೆದು ಕೊಳ್ಳುವ ಶಕ್ತಿಯನ್ನು ಆ ದೇವರುಕೊಡಲೆಂದು ಶಿಕ್ಷಕರು ಪ್ರಾರ್ಥಿಸಿದ್ದಾರೆ.