ಬೆಂಗಳೂರು –
ಶಿಕ್ಷಕರ ವರ್ಗಾವಣೆಯ ವಿಚಾರದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಬೀದಿಗಿಳಿಯರು ಸಿದ್ದರಾಗುತ್ತಿದ್ದಾರೆ.ಏನೇಲ್ಲಾ ಕಷ್ಟ ನೋವುಗಳನ್ನು ಮೀರಿ ಅವುಗಳೆಲ್ಲವನ್ನು ಬದಿಗಿಟ್ಟು ಇದರೊಂದಿಗೆ ಹೆಂಡತಿ ಒಂದು ಕಡೆ ಗಂಡ ಮತ್ತೊಂದು ಕಡೆಗೆ ಮಕ್ಕಳು ಇನ್ನೊಂದು ಕಡೆಗೆ ಇದರ ನಡುವೆ ಪೋಷ ಕರು ಅತ್ತ ಹತ್ತಾರು ವರ್ಷಗಳಿಂದಲೂ ಇಲಾಖೆ ಯಲ್ಲಿ ಕರ್ತವ್ಯ ಮಾಡುತ್ತಿರುವ ಶಿಕ್ಷಕರಿಗೆ ಇನ್ನೂ ಕೂಡಾ ವರ್ಗಾವಣೆಯ ಭಾಗ್ಯ ಸಿಗುತ್ತಿಲ್ಲ ಹೀಗಾಗಿ ಬೇಸತ್ತ ಅದೇಷ್ಟೋ ಶಿಕ್ಷಕರು ಕಂಗಾಲಾಗಿದ್ದು ತಾವು ಅಂದುಕೊಂಡಂತೆ ಆಸೆ ಇಟ್ಟುಕೊಂಡಂತೆ ವರ್ಗಾ ವಣೆ ಮಾತ್ರ ಆಗುತ್ತಿಲ್ಲ ಈ ಕುರಿತಂತೆ ಕೆಲವು ನಿಮ ಯಗಳನ್ನು ಸಡಿಲಿಕೆ ಮಾಡಿ ವರ್ಗಾವಣೆ ಪ್ರಕ್ರಿಯೆ ಯನ್ನು ಮುಗಿಸಿ ಎಂದು ನಾಡಿನ ಶಿಕ್ಷಕರು ಕೇಳಿದರು ಯಾರು ಸ್ಪಂದಿಸುತ್ತಿಲ್ಲ ಕೇಳಿದರು ಕೇಳಲಾರದಂತೆ ಕಂಡರು ಕಾಣಿಸಿದಂತೆ ಇದ್ದಾರೆ.

ಹೀಗಿರುವಾಗ ಆಗೋ ಹಿಗೋ ಮಾಡಿ ಕೊನೆಗೂ ವರ್ಗಾವಣೆ ಆರಂಭಗೊಂಡಿತು ಎಂದುಕೊಂಡ ಶಿಕ್ಷಕರಿಗೆ ನೂರಾರು ಸಮಸ್ಯೆಗಳು ನಿಯಮಗಳು ಆದ್ರೂ ಮತ್ತೆ ಅದೇ ಸಮಸ್ಯೆ ಯಾವುದು ಕೂಡಾ ಅಂದುಕೊಂಡಂತೆ ಆಗುತ್ತಿಲ್ಲ. ಶಿಕ್ಷಕರ ಧ್ವನಿಯಾಗಿ ರುವ ಸಂಘಟನೆಯ ನಾಯಕರೇ ಮಾತ್ರ ಮೌನ ವಾಗಿದ್ದಾರೆ ಹೀಗಾಗಿ ಇದೇಲ್ಲವನ್ನು ನೋಡಿ ಕಂಡು ಬೇಸತ್ತ ನಾಡಿನ ಶಿಕ್ಷಕರು ಈಗ ಬೀದಿಗಿಳಿದು ಹೋರಾಟ ಮಾಡಲು ಸಿದ್ದರಾಗುತ್ತಿದ್ದಾರೆ.

ಹೌದು 45 ದಿನಗಳಲ್ಲಿ ಶಿಕ್ಷಕರ ವರ್ಗಾವಣೆಯ ಪ್ರಕ್ರಿಯೆಯನ್ನು ಮುಗಿಸಬೇಕು ಇಲ್ಲವಾದರೆ ಬೆಂಗಳೂರು ಚಲೋ ಗೆ ಸಿದ್ದರಾಗಿ ಎಂದು ಕರೆ ಕೊಡುತ್ತಿದ್ದಾರೆ.ಇದರೊಂದಿಗೆ ವರ್ಗಾವಣೆಗಾಗಿ ಬೆಂಗಳೂರು ಚಲೋ ಎಂಬ ಮತ್ತೊಂದು ಸಂದೇಶ್ ಪೊಸ್ಟ್ ಮಾಡಿದ್ದಾರೆ.

ಎಲ್ಲರೂ ಒಗ್ಗಟ್ಟಾಗಿ ಒಗ್ಗಟ್ಟಿ ನಲ್ಲಿ ಬಲವಿದೆನಮ್ಮ ಕೂಗು ರಾಜಧಾನಿಗೆ ಮುಟ್ಟ ಬೇಕು,ಇದು ಎಲ್ಲರ ಧನಿಯಿಂದ ಮಾತ್ರ ಸಾಧ್ಯ ನಮ್ಮ ಗುರಿ 25 ಎಂಬ ನಿಯಮವನ್ನು ರದ್ದು ಮಾಡೋದು ಹೀಗೆ ನಾಲ್ಕೈ ದು ಸಂದೇಶಗಳನ್ನು ಶಿಕ್ಷಕರು ಪೊಸ್ಟ್ ಮಾಡಿದ್ದು ಇದನ್ನೇಲ್ಲ ವನ್ನು ನೋಡಿದರೆ ವರ್ಗಾವಣೆಯ ವಿಚಾರದಲ್ಲಿ ನಾಡಿನ ತುಂಬೆಲ್ಲಾ ಶಿಕ್ಷಕರು ಅಸಮಾ ಧನಗೊಂಡಿದ್ದು ಇನ್ನಾದರೂ ಇವರ ಎಲ್ಲಾ ಸಮಸ್ಯೆ ಗಳನ್ನು ನೂರಾರು ನಿಯಮಗಳನ್ನು ಬದಿಗಿಟ್ಟು ಶಿಕ್ಷಣ ಸಚಿವರು ಅಧಿಕಾರಿಗಳು ಒಂದು ತಿಂಗಳಲ್ಲಿ ಈ ಒಂದು ವರ್ಗಾವಣೆ ಮುಗಿಸಿ ಅದರಲ್ಲೂ ಶಿಕ್ಷಕರು ಅಂದುಕೊಂಡಂತೆ ಮಾಡೊದು ಅವಶ್ಯಕ ವಿದೆ ಇಲ್ಲವಾದರೆ ಬರುವ ದಿನಗಳಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಲಿದೆ.