ಬೆಂಗಳೂರು –
ನವಂಬರ್ 29 ರಿಂದ ರಾಜ್ಯದಲ್ಲಿ ಮತ್ತೆ ಹೊಸದಾಗಿ ಪರಿಷ್ಕ್ರತ ವೇಳಾಪಟ್ಟಿಯಂತೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ.ತಾಂತ್ರಿಕವಾದ ಸಮಸ್ಯೆಗಳನ್ನು ಪರಿಹರಿಸಿ ಹೊಸದಾಗಿ ವೇಳಾಪಟ್ಟಿಯನ್ನು ಇಲಾಖೆ ಈಗಾಗಲೇ ಬಿಡುಗಡೆ ಮಾಡಿದ್ದು ಒಂದು ವಿಚಾರದವಾದರೆ ಇತ್ತ ಈ ಒಂದು ವರ್ಗಾವಣೆಯಲ್ಲಿ ಅವಕಾಶ ಸಿಗುತ್ತಿಲ್ಲ ಹಾಗೇ ಇನ್ನೂ ಕೆಲವೊಂದಿಷ್ಟು ಸಮಸ್ಯೆಗಳಿದ್ದು ಇದರಿಂದಾಗಿ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ಪರದಾಡುತ್ತಿದ್ದು ಒಂದು ಕಡೆ ಗೊಂದಲ ಮತ್ತೊಂದು ಕಡೆಗೆ ಸರಿಯಾಗಿ ಆಗದ ವರ್ಗಾವಣೆ ಪ್ರಕ್ರಿಯೆ ಇದರಿಂದಾಗಿ ಬೇಸತ್ತು ವರ್ಗಾವಣೆಯ ಆರಂಭದ ಬೆನ್ನಲ್ಲೇ ಈಗ ಶಿಕ್ಷಕರು ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ.
ಹೌದು ಈ ಒಂದು ಶಿಕ್ಷಕರ ವರ್ಗಾವಣೆಯ ಗೊಂದಲವನ್ನು ನಿವಾರಿಸಿ ಎಂದು ಬೃಹತ್ ಪ್ರಮಾಣದ ಪ್ರತಿಭಟನೆಗೆ ಶಿಕ್ಷಕರು ನಿರ್ಧಾರವನ್ನು ಕೈಗೊಂಡಿದ್ದು ಕಲ್ಬುರ್ಗಿಯಲ್ಲಿ ಈ ಒಂದು ಪ್ರತಿಭಟನೆ ನಡೆಯಲಿದೆ.ಐದು ಸಾವಿರಕ್ಕೂ ಹೆಚ್ಚು ಶಿಕ್ಷಕರು ಈ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಹೋರಾಟದ ಕೂಗು ಜೋರಾಗಿದ್ದು ಸಿಡಿದೆದ್ದ ಶಿಕ್ಷಕರು ಇದೇ ನಮಗೆ ಅಂತಿಮ ದಾರಿ ಎಂದಕೊಂಡು ಈವರೆಗೆ ಈ ಕುರಿತಂತೆ ಸಂಘದ ನಾಯಕರು ಮುಖಂಡರು ಧ್ವನಿ ಎತ್ತುತ್ತಾರೆ ಎಂದು ಕೊಂಡು ಕಾದು ಕಾದು ಬೇಸತ್ತು ಈಗ ಶಿಕ್ಷಕರೇ ಮುಂದಾಗಿ ಹೋರಾಟಕ್ಕೆ ನಿರ್ಧಾರವನ್ನು ತಗೆದುಕೊಂಡಿದ್ದಾರೆ
ನಾಳೆ ಅಥವಾ ನಾಡಿದ್ದು ಮಹೂರ್ತ ನಿಗದಿಯಾಗಲಿದೆ. ಇನ್ನೂ ಈ ಒಂದು ಪ್ರತಿಭಟನೆಯಲ್ಲಿ ಉರುಳುಸೇವೆ ಮಾಡಲು ಮುಂದಾಗಿದ್ದು ಹೋರಾಟದ ಕರೆ ಜೋರಾಗು ತ್ತಿದ್ದು ಶಿಕ್ಷಕರು ಬೀದಿಗಿಳಿಯುವ ಮುನ್ನವೇ ಇನ್ನಾದರೂ ಇಲಾಖೆಯವರು ಸಚಿವರು ಶಿಕ್ಷಕರ ವರ್ಗಾವಣೆಯ ಗೊಂದಲವನ್ನು ಪರಿಹಾರ ಮಾಡಬೇಕು.