ಧಾರವಾಡ –
ಹೋಳಿ ಹಬ್ಬದ ಆಚರಣೆ ಧಾರವಾಡದಲ್ಲಿ ವಿಭಿನ್ನ ವಾಗಿ ವಿಶೇಸವಾಗಿ ಕಂಡು ಬಂದಿತು ನಗರದ ಕುಮಾರೇಶ್ವರ ನಗರದಲ್ಲಿ ಹೋಳಿ ಹಬ್ಬವನ್ನು ಶ್ರೀಸಾಯಿ ಯುವಕ ಮಂಡಳದ ಸದಸ್ಯರು ಅರ್ಥ ಪೂರ್ಣವಾಗಿ ಹಬ್ಬವನ್ನು ಆಚರಿಸಿದರು.

ಹಬ್ಬದ ಹಿನ್ನಲೆಯಲ್ಲಿ ನೈಸರ್ಗಿಕ ಬಣ್ಣಗಳನ್ನು ಪರಸ್ಪರ ಹಚ್ಚಿದ ಯುವಕ ಮಂಡಳದ ಸದಸ್ಯರು ಬಡಾವಣೆ ತುಂಬೆಲ್ಲಾ ಒಂದು ಸುತ್ತು ಹಾಕಿ ಸಖತ್ ಎಂಜಾಯ್ ಮಾಡಿದರು.

ಇದೇ ವೇಳೆ ಇಪ್ಪತ್ತಕ್ಕೂ ಹೆಚ್ಚು ಗೆಳೆಯರು ಬಣ್ಣಗಳನ್ನು ಎರಚಾಡಿ ಹೋಳಿ ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿದ್ದು ಕಂಡು ಬಂದಿತು. ಸಂತೋಷ ದೇವರಡ್ಡಿ,ಅಮೀತ ಬಸಾಪೂರ,
ಸಂತೋಷ ಕೋಟಿ,ಪ್ರಭು ಹಿರೇಮಠ,ರಮೇಶ ಕುಂಬಾರ, ಬಸವರಾಜ.ಪ್ರವೀಣ ತೋಟದ, ವೇದಕುಮಾರ ನವಲಗುಂದ,ವಿಶ್ವನಾಥ ಪವಾರ, ಸಂತೋಸ ಕೋಟಿ,ಮಂಜುನಾಥ ಶೆಟ್ಟಿ, ವಿಕ್ರಮ್ ಹೊಳೆಯನ್ನವರ,ಕಿಟ್ಟು,ಸೇರಿದಂತೆ ಹಲವರು ಹೋಳಿ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಇದೇ ವೇಳೆ ಡ್ಯಾನ್ಸ್ ಮಾಡುತ್ತಾ ಹಾಡಿಗೆ ಹೆಜ್ಜೆ ಹಾಕಿ ಖುಷಿ ಪಟ್ಟರು.

ಇನ್ನೂ ಇತ್ತ ನಗರದ ಹಲವೆಡೆ ಚಿಣ್ಣರ ಹೋಳಿ ಆಚರಣೆ ಮಾಡಿದ್ದು ಕಂಡು ಬಂದಿತು. ಮಂಜು ಬಡಿಗೇರ ಪುತ್ರಿಯರು ಕೂಡಾ ಹಬ್ಬವನ್ನು ಆಚರಣೆ ಮಾಡಿದರು.