ಆಟೋ ಅಪಘಾತ ಗಂಭೀರವಾಗಿ ಗಾಯಗೊಂಡ ಮೂವರು ಶಿಕ್ಷಕಿಯರು ಔದಾರ್ಯ ಮೆರೆದ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದದವರು…..

Suddi Sante Desk

ವಿಜಯಪುರ –

ಆಟೋ ವೊಂದು ಅಪಘಾತ ವಾಗಿ ಮೂವರು ಶಿಕ್ಷಕಿ ಯರು ತೀವ್ರವಾಗಿ ಗಾಯಗೊಂಡಿರುವ ಘಟನೆ ವಿಜಯ ಪುರ ದಲ್ಲಿ ನಡೆದಿದೆ.ಹೌದು ಗಣರಾಜ್ಯೋತ್ಸವ ದಿನಾಚರ ಣೆಯ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ ಶಿಕ್ಷಕಿ ಯರು ರಿಕ್ಷಾದಲ್ಲಿ ಮನೆಗೆ ಮರಳುತ್ತಿರುವಾಗ ದಾರಿ ಮದ್ಯ ದಲ್ಲಿ ರಿಕ್ಷಾ ಹಾಗೂ ಮೋಟಾರ್ಸೈಕಲ್ ನಡುವೆ ಅಪಘಾತ ಉಂಟಾಗಿದೆ.

ಇನ್ನೂ ಈ ಒಂದು ಅವಘಡದಿಂದಾಗಿ ಘಟನೆ ಯಲ್ಲಿ ಮೂವರು ಜನ ಶಿಕ್ಷಕಿಯರು ಗಂಭೀರವಾಗಿ ಗಾಯಗೊಂ ಡು ನರಳುವುದನ್ನು ನೋಡಿದ ಬಹಳಷ್ಟು ಜನರು ಫೋಟೋ ವಿಡಿಯೋ ತೆಗಿಯುವುದರಲ್ಲಿ ತೊಡಗಿದ್ದರೇ ಹೊರತು ಗಾಯಾಳುಗಳ ನೆರವಿಗೆ ಗಮನ ಕೊಡದೇ ಹೋದರು.ಆದರೆ ಅದೇ ಸಮಯದಲ್ಲಿ ವಿಜಯಪುರ ಜಿಲ್ಲೆಯ ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)ತಿಕೋಟಾ ತಾಲೂಕ ಘಟಕದ ಪ್ರಧಾನ ಕಾರ್ಯ ದರ್ಶಿಯಾದ ಶ್ರೀಮತಿ ಭಾರತಮಾತಾ ಗುಜರೆ ಇವರು ತಕ್ಷಣದಲ್ಲಿ ಧಾವಿಸಿ ಗಾಯಗೊಂಡಿದ್ದ ಆ ಮೂರು ಜನ ಶಿಕ್ಷಕಿಯರನ್ನು ಕಾರಿನೊಳಗೆ ಕರೆದುಕೊಂಡು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಉಪಚಾರ ಮಾಡಿಸಿದರು

ತಮ್ಮ ಸೇವಾ ಔದಾರ್ಯ ಮೆರೆದಿದ್ದಾರೆ. ಹಾಗೂ ಸಂಘದ ಆದರ್ಶಗಳಿಗೆ ಮಾದರಿಯಾಗಿ ನಡೆದುಕೊಂಡಿದ್ದಾರೆ. ತದನಂತರದಲ್ಲಿ ಇಲಾಖಾಧಿಕಾರಿಗಳು ಸಂಘಟನೆಗಳ ನಾಯಕರುಗಳು ಸಹಾ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿ ಸಿದ್ದಾರೆ.ಈ ಸುದ್ದಿ ತಿಳಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ ಮುಳ್ಳೂರ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಶ್ರೀಮತಿ ಜ್ಯೋತಿ ಎಚ್ ,ವಿಜಯಪುರ ಜಿಲ್ಲಾ ಅಧ್ಯಕ್ಷರು ಶ್ರೀಮತಿ A. B. ನಾಯಕ. ಹಾಗೂ ರಾಜ್ಯದಿಂದ ಹಲವಾರು ಪದಾಧಿಕಾರಿಗಳು ತಿಕೋಟಾ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಭಾರತಮಾತಾ ಗುಜರೆ ರವರ ಸೇವಾ ಕಾರ್ಯ ಮೆಚ್ಚಿ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

ಇದೇ ಸಂದರ್ಬದಲ್ಲಿ ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷ ರಾದ ಕು.ಎಂ.ಸಿ.ಗಿರಣಿ ವಡ್ಡರ ರವರು ಸಹಾ ಕಳೆದ ಬಾರಿ ದ್ವಿಚಕ್ರ ವಾಹನ ಉರುಳಿಬಿದ್ದು ಗಾಯಗೊಂಡಿದ್ದ ವ್ಯಕ್ತಿಗೆ ಉಪಚರಿಸಿದ್ದ ಕ್ಷಣಗಳನ್ನು ನೆನಯಬಹುದಾಗಿದೆ. ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಟನೆ ಶೈಕ್ಷಣಿಕ ಕೆಲಸಗಳಿಗೆ ಸೀಮಿತವಾಗದೇ ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿ ನಾಡಿನ ಇತರ ಸಂಘಟನೆ ಗಳಿಗೆ ಇಂದು ಮಾದರಿಯಾಗಿ ಕಂಡು ಬಂದಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.