ಹುಬ್ಬಳ್ಳಿ –
ಕಲ್ಲಿನ ಕಡಿಯನ್ನು ತುಂಬಿಕೊಂಡು ಹೊರಟಿದ್ದ ಟಿಪ್ಪರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಹುಬ್ಬಳ್ಳಿಯ ಸನಾ ಕಾಲೇಜ್ ಹತ್ತಿರ ಬೆಳಗಿನ ಜಾವ ನಡೆದಿದೆ.

ಬೆಳಗಿನ ಜಾವ ಇಬ್ಬನಿ ಹೆಚ್ಚಾಗಿರುವುದು ಚಾಲನೆಗೆ ತೊಂದರೆಯನ್ನುಂಟು ಮಾಡಿದೆ.ಅಲ್ಲದೇ ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಟಿಪ್ಪರ್ ವಾಹನ ಪಲ್ಟಿಯಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭ ವಿಸಿಲ್ಲ. ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪೊಲೀಸರು ಹಾಗೂ ಹೆದ್ದಾರಿ ಗಸ್ತು ಪೊಲೀಸರು ಟಿಪ್ಪರ್ ಲಾರಿಯನ್ನು ಎತ್ತುವ ಮೂಲಕ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
