ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡದಲ್ಲೂ ಎರಡನೇ ದಿನವೂ ಸಾರಿಗೆ ನೌಕರರ ಧರಣಿ ಮುಂದುವರೆದಿದೆ. ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಸಂಪೂರ್ಣವಾಗಿ ಬಸ್ ಬಂದ್ ಮಾಡಲಾಗಿದೆ.ಇನ್ನು ಬಸ್ ಸ್ಟಾಂಡ್‌ನತ್ತ ಮುಖ ಮಾಡದ ಸಾರಿಗೆ ಬಸ್ ಗಳು.ಇದರಿಂದ ಧಾರವಾಡ ,ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣ ಬಸ್ ಗಳು ಇಲ್ಲದೇ ಖಾಲಿ ಖಾಲಿಯಾದ ಚಿತ್ರಣ ಕಂಡು ಬಂದಿತು.

ಬಸ್ ಗಳಿಗಾಗಿ ಕಾದು ಕುಳಿತ ಪ್ರಯಾಣಿಕರು.ಹೊರ ಜಿಲ್ಲೆ ಹಾಗೂ ಗ್ರಾಮಾಂತರ ಭಾಗಗಳಿಗೂ ಬಸ್ ಗಳು ಇಲ್ಲದೇ ಜನರ ಪರದಾಟ ಇವೆಲ್ಲವುಗಳು ಕಂಡು ಬಂದವು.ಸಾರಿಗೆ ನೌಕರರ ಮುಷ್ಕರದಿಂದಾಗಿ ಜನರಿಂದ ತುಂಬಿ ತುಳುಕುತ್ತಿದ್ದ ನಿಲ್ದಾಣಗಲಕು ಬಿಕೋ ಎನ್ನುತ್ತಿರುವ ದೃಶ್ಯಗಳು ಕಂಡು ಬಂದವು.ಹುಬ್ಬಳ್ಳಿಯ ಮತ್ತು ಧಾರವಾಡದ ಹಳೆ ಬಸ್ ನಿಲ್ದಾಣದಲ್ಲಿ ಇಂಥಹ ಚಿತ್ರಣಗಳು ಕಂಡು ಬಂದವು.

ಮತ್ತೊಂದೆಡೆ ಬಸ್ ಇಲ್ಲದೇ ಪ್ರಯಾಣಿಕರ ಪರದಾಟ.ಗ್ರಾಮೀಣ ಪ್ರದೇಶ, ದೂರದ ಊರುಗಳಿಗೆ ಸಂಚರಿಸುವವರ ಪರದಾಟ ಗೋಳು ನಿನ್ನೆಯಿಂದ ಹಳೆ ಬಸ್ ನಿಲ್ದಾಣದಲ್ಲೇ ವಾಸ್ತವ್ಯ ಒಂದಕ್ಕೆ ಮೂರರಷ್ಟು ಬೆಲೆ ತೆತ್ತಿ ಊಟ ಮಾಡುತ್ತಿರುವ ಚಹಾ ಸವಿಯುತ್ತಿರುವ ಪ್ರಯಾಣಿಕರು.

ಅತ್ತ ಮನೆಗೂ ಹೋಗದೇ ಪ್ರಯಾಣಿಕರ ಗೋಳು.ಇಂಥಹ ದೃಶ್ಯಗಳು ಸೇರಿದಂತೆ ಹಲವಾರು ಪ್ರಮುಖ ಚಿತ್ರಣಗಳು ಕಂಡು ಬಂದವು. ಬಸ್ ಬಂದ್ ಇರುವುದನ್ನು ಬಂಡವಾಳ ಮಾಡಿಕೊಂಡ ಕೆಲ ವ್ಯಾಪಾರಸ್ಥರು.ಹೀಗೆ ಮಾಡ್ತಾ ಇದ್ದಾರೆ. ಇನ್ನೂ ಇತ್ತ ಚಾಲಕರು ನಿರ್ವಾಹಕರು ಇಂದು ತಮ್ಮ ಹೋರಾಟವನ್ನು ಜೋರಾಗಿ ಮಾಡ್ತಾ ಇದ್ದಾರೆ.

ಹೀಗಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಈ ಮೂಲಕ ಅವಳಿ ನಗರದಲ್ಲಿ ಸಂಪೂರ್ಣ ಬೆಂಬಲ ನೀಡಿದ್ದು ಇತ್ತ ಸಾರ್ವಜನಿಕರ ಪರದಾಟ ಗೋಳಾಟ ಹೆಚ್ಚಾಗಿದೆ.