This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

Local News

ಶಿಕ್ಷಕರ ನಿಜವಾದ ಧ್ವನಿ ಎಸ್ ಐ ಚಿಕ್ಕನರ್ತಿ – ಇರಬೇಕು ಶಿಕ್ಷಕರ ನಾಯಕರಾದವರಿಗೆ ಇಂತಹ ಆದರ್ಶ ಗುಣ…..

WhatsApp Group Join Now
Telegram Group Join Now

ಕಲಘಟಗಿ –

ಮನುಷ್ಯ ಸಂತೋಷ, ಸಂಭ್ರಮದ ಕಾರ್ಯಗಳಲ್ಲಿ ಹೆಚ್ಚು ಬೆರೆಯುತ್ತಾನೆ. ಹಾಗೆ ನಲಿಯುತ್ತಾನೆ.ಆದರೆ ಅದೇ ಸಂಕಟ ದುಃಖದ ಘಟನೆಗಳಿದ್ದಲ್ಲಿ ಸಮೀಪ ಕ್ಕೂ ಸುಳಿಯುವುದು ಕಡಿಮೆ ಅದರಲ್ಲೂ ಈ ಮಹಾಮಾರಿ ಕರೋನಾದಂತಹ ಮಹಾಮಾರಿಯ ಕಾಲಘಟ್ಟದಲ್ಲೂ ಅಷ್ಟೆ.ಆದರೆ ಶಿಕ್ಷಕರ ಸ್ನೇಹಿತರ ಅಪಘಾತ,ಆಘಾತದಂತಹ ಘಟನೆಗಳಲ್ಲಿ ಮುಂ ಚೂಣಿ ಸ್ಥಾನದಲ್ಲಿದ್ದು ಆ ಕುಟುಂಬಕ್ಕೆ ಧೈರ್ಯ ತುಂಬಿ ಅಲ್ಲಿ ನಡೆಯಬೇಕಾದ ಎಲ್ಲಾ ಕಾರ್ಯಗ ಳನ್ನು ಮಾಡಿಯೇ ಮನೆಗೆ ತೆರಳುವಂತಹ ಅಪರೂ ಪದ ಹಾಗೂ ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ವಿಸ್ಮಯ ವ್ಯಕ್ತಿಯೇ ಶಿವಾನಂದ ಚಿಕ್ಕನರ್ತಿ.

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಸರಕಾರಿ ಬಾಲಕರಿಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ನಾಯಕತ್ವದ ಗುಣ ಗಳನ್ನು ಹೊಂದಿರುವ ಈ ವ್ಯಕ್ತಿ ಶಿಕ್ಷಕರ ಪರಿವಾರದ ಲ್ಲಿ ಸಂಭವಿಸುವ ಸಹಜವಾದ ಹಾಗೂ ಅಸಹಜ ಸಾವಿನ ಪ್ರಸಂಗಗಳು ಎಲ್ಲೆ ಜರುಗಿದರೂ ಅವರು ಮೊದಲಿಗರಾಗಿ ನಿಲ್ಲುತ್ತಾರೆ.

ಎಷ್ಟೇ ಸಮಯವಾದರೂ ನಿಂತು ಅಲ್ಲಿಯ ಪದ್ದತಿ ಗಳನ್ನು ಮುಗಿಯಿಸಿಯೇ ಮನೆಗೆ ತೆರಳುವುದು. ಸಾವು ಶವ ಎಂದಾಗ ಭಯ ಭೀಳುವ ಜನರಲ್ಲಿ ನೀವು ಶವವನ್ನು ಸ್ನಾನ ಮಾಡಿಸುವ, ಅಂತ್ಯಸಂಸ್ಕಾ ರದಲ್ಲೂ ಮುಂದೆ ನಿಂತು ಆ ಕ್ರಿಯೆಯಲ್ಲಿ ಭಾಗವಹಿ ಸುವ ಗುಣಕ್ಕೆ ಅಚ್ಚರಿ ವಿಸ್ಮಯವಾಗುತ್ತದೆ ಎಂದರೆ. ಪ್ರತಿ ಜೀವಿಗೂ ಅಂತ್ಯವಿರುತ್ತದೆ.ಹುಟ್ಟಿನಷ್ಟೆ ಸಾವು ಸಹಜ. ಅದಕ್ಕೇಕೆ ಭಯ ಎನ್ನುವ ಇವರು ಅದೇನೋ ಪರರ ದುಃಖದಲ್ಲಿ ಭಾಗಿಯಾಗುವುದ ರಲ್ಲಿ ನನಗೆ ಖುಶಿ ಇದೆ ಎನ್ನುತ್ತಾರೆ.

ಇದಕ್ಕೆಲ್ಲಾ ನನ್ನ ಧರ್ಮಪತ್ನಿ ಶಿಕ್ಷಕಿ ನಿಂಗಮ್ಮ ಹೊಸೂರ ಇವರ ಸಹಕಾರವನ್ನು ನೆನೆಯುತ್ತಾರೆ. ಹೀಗಾಗಿ ಶಿವಾನಂದ ಇವರು ಶಿಕ್ಷಕರ ಪ್ರೀತಿಗೆ ಪಾತ್ರ ರಾಗಿದ್ದಾರೆ.ಸಂಘಟನೆಗಳ ನಾಯಕರಾಗಿಯೂ ಇದ್ದಾರೆ.ಇದಕ್ಕೆ ಉದಾಹರಣೆ ಎನ್ನುವಂತೆ.ಇದೀಗ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಲಘಟಗಿ ತಾಲೂಕಾ ಘಟಕದ ಅಧ್ಯಕ್ಷರಾಗಿದ್ದಾರೆ.

ಸರಕಾರಿ ನೌಕರರ ಸಂಘ ಕಲಘಟಗಿ ಹಾಗೂ ಕಲ ಘಟಗಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತು ಬೆಳೆಸುವ ಸಂಘಗಳ ನಿರ್ಧೇಶಕರಾಗಿದ್ದಾರೆ.ಸಂತೋಷ, ದುಃಖ ದ ಪ್ರಸಂಗಗಳಲ್ಲಿ ಮುಂದಾಗುವ ಶಿವಾನಂದ ಚಿಕ್ಕನ ರ್ತಿ ಅವರ ಅಪರೂಪದ ಗುಣವನ್ನು ಕಲಘಟಗಿಯ ಸಾಹಿತಿ ವೈ,ಜಿ,ಭಗವತಿ.

ಇನ್ನೂ ಇವರ ಸಾಧನೆಯನ್ನು ಹಾಗೂ ಶಿಕ್ಷಕ ಸಂಘ ದ ರಾಜ್ಯ ಘಟಕದ ನೇತಾರ ಎಲ್ ಆಯ್ ಲಕ್ಕಮ ನವರ, ಎಸ್ ಎಫ್ ಪಾಟೀಲ,ರವಿ ಬಂಗೇನವರ, ಆರ್ ನಾರಾಯಣಸ್ವಾಮಿ ಚಿಂತಾಮಣಿ, ಹನುಮಂ ತ ಬೂದಿಹಾಳ,ಚಂದ್ರಶೇಖರ ಶೆಟ್ರು ಸೇರಿದಂತೆ ಹಲವರು ಪ್ರಶಂಸಿಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk