ಬೆಂಗಳೂರು –
ಸರ್ಕಾರಿ ನೌಕರರ ಸಮಸ್ಯೆ ಸೌಹಾರ್ದಯುತ ವಾಗಿ ಬಗೆ ಹರಿಯಲಿದೆ ಎಂದ CM – ಬೇಡಿಕೆ ಗಳ ಕುರಿತು ಮುಂದುವರಿದ ರಾಜ್ಯ ಸರ್ಕಾರದ ಹಗ್ಗ ಜಗ್ಗಾಟ ಹೌದು ಸರ್ಕಾರಿ ನೌಕರರ ಜೊತೆ ಸೌಹಾ ರ್ದಯುತ ಸಭೆ ನಡೆದಿದ್ದು ಸೌಹಾರ್ದಯುತ ವಾಗಿ ಸಮಸ್ಯೆ ಬಗೆ ಹರಿಯಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಸಭೆಯ ನಂತರ ಮಾತನಾಡಿದ ಅವರು, ನಮ್ಮ ಹಿರಿಯ ಅಧಿಕಾರಿಗಳ ಜೊತೆ ಹಾಗೂ ನೌಕರರ ಸಂಘದವರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದೇವೆ.
ಅವರು ಹಲವಾರು ವಿಷಯ ಪ್ರಸ್ತಾಪ ಮಾಡಿ ದ್ದಾರೆ ಸಾಕಷ್ಟು ವಿಷಯ ಚರ್ಚೆಯಾಗಿದೆ ಅವರು ಯಾವುದಾದರೂ ಒಂದು ತೀರ್ಮಾನಕ್ಕೆ ಬಂದ ಮೇಲೆ ನಮ್ಮ ಹಣಕಾಸಿನ ನಿರ್ಧಾರ ತೆಗೆದು ಕೊಳ್ಳಲು ಅನುಕೂಲವಾಗಲಿದೆ.ನಮ್ಮ ಮಾತು ಕತೆಯ ಆಧಾರದ ಮೇಲೆ ಮಾತುಕತೆ ಸೌಹಾರ್ದ ಯುತವಾಗಿ ಮುಕ್ತಾಯವಾಗುವ ವಿಶ್ಬಾಸ ಇದೆ ಎಂದರು.
ಪದಾಧಿಕಾರಿಗಳ ಜೊತೆ ಚರ್ಚಿಸಿ ನಿರ್ಣಯ ತಿಳಿಸಿದ್ದು ನಿರ್ಣಯದ ಆಧಾರದ ಮೇಲೆ ನಾವು ನಿರ್ಣಯ ಕೈಗೊಳ್ಳುತ್ತೇವೆ.ವೇತನ ಆಯೋಗಕ್ಕೆ ಆದಷ್ಟು ಬೇಗ ಮಧ್ಯಂತರ ವರದಿ ನೀಡುವಂತೆ ಕೇಳಿದ್ದೇವೆ.ಆದಷ್ಟು ಬೇಗ ವರದಿ ಬರುವ ವಿಶ್ವಾಸ ಇದೆ ಎಂದು ಹೇಳಿದರು.
ಕೊವಿಡ್ ಸಮಯದಲ್ಲಿ ಸರ್ಕಾರ ಅವರ ಸಂಬಳ ಕಡಿತ ಮಾಡಿಲ್ಲ.ಅಲ್ಲದೇ 24 ಗಂಟೆಯಲ್ಲಿ ಡಿಎ ಹೆಚ್ಚಳ ಮಾಡಿದ್ದೇವೆ.ಅದನ್ನು ಅವರು ಅಪ್ರಿಸಿ ಯೇಟ್ ಮಾಡಿದ್ದಾರೆ.ಮಾತುಕತೆಯ ಆಧಾರ ದಲ್ಲಿ ಅವರ ನಿರ್ಣಯದ ಆಧಾರದ ಮೇಲೆ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದರು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..