ಯಾದಗಿರಿ –
ಪುರಸಭೆಯೊಂದರ ಚುನಾವಣೆಯಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಗೆಲವು ಸಾಧಿಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.ಹೌದು ಕಾಂಗ್ರೆಸ್ ಪಕ್ಷ ದಿಂದ ಸ್ಪರ್ಧೆ ಮಾಡಿದ್ದ ಯುವಕ ಗೆಲುವು ಸಾಧಿಸಿದ್ದಾನೆ
ಕಕ್ಕೇರಾ ಪುರಸಭೆಯ ವಾರ್ಡ್ ನಂ.6 ರಲ್ಲಿ ಪರಶುರಾಮ ಗೆಲುವನ್ನು ಸಾಧಿಸಿದ್ದಾನೆ. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಯುವಕನನ್ನು ಯಾದಗಿರಿಯ ಕಕ್ಕೇರಾ ವಾರ್ಡ್ ನ ಮತದಾರರು ಕೈಹಿಡಿದಿದ್ದಾರೆ.ಕಳೆದ ಹಲವಾರು ವರ್ಷ ಗಳಿಂದ ಪೆಟ್ರೊಲ್ ಬಂಕ್ ನಲ್ಲಿ ಕೆಲಸವನ್ನು ಮಾಡುತ್ತಿದ್ದ ಪರಶುರಾಮ ಹೊಸ ಕನಸು ಅಭಿವೃದ್ದಿಯ ಯೋಜನೆ ಗಳನ್ನು ಮುಂದಿಟ್ಟುಕೊಂಡು ಸ್ಪರ್ಧೆ ಮಾಡಿದ್ದರು ಮೊದಲ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದಾರೆ.