ಹುಬ್ಬಳ್ಳಿ –
ಎಸಿಪಿ ಯೊಬ್ಬರು ಪೊಲೀಸ್ ಪೇದೆಗೆ ಕಪಾಳ ಮೋಕ್ಷ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಸಂಚಾರಿ ವಿಭಾಗದ ACP ಹೊಸಮನಿ ಅವರಿಂದ ಇಂಥದೊಂದು ಹೇಯ ಕೃತ್ಯ ನಡೆದಿದೆ.

ಅವಳಿನಗರದಲ್ಲಿ ಅಕ್ರಮ ಮರಳು ವ್ಯವಹಾರದ ಬಗ್ಗೆ ಅಸಮಾಧಾನಗೊಂಡು ಆರ್ಥಿಕವಾಗಿ ಜರ್ಜರಿತಗೊಂಡ ಸಂಚಾರಿ ಎಸಿಪಿ ಯಿಂದ ದುರ್ವವರ್ತನೆ ನಡೆದಿದೆಯಂತೆ. ಠಾಣೆಯಲ್ಲೇ ಗುರುನಾಥ ಜಗಾಪೂರ ಎಂಬ ಪೇದೆಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಇದರೊಂದಿಗೆ ಇಲಾಖೆಯ ಮಾನ ಹರಾಜು ಹಾಕಿದ್ದಾರೆ ACP ಯವರು. ಸಂಚಾರಿ ವಿಭಾಗದ ACP ಹೊಸಮನಿ ಅವರಿಂದ ಈ ಒಂದು ಹೇಯ ಕೃತ್ಯ ನಡೆದಿದೆ.ಮೊನ್ನೆ ಅಷ್ಟೇ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಒಂದು ಘಟನೆ ನಡೆದಿದ್ದು ಬೆಳಕಿಗೆ ಬಂದಿದೆ.
ಸಧ್ಯ ಹುಬ್ಬಳ್ಳಿ ಧಾರವಾಡ ದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ACP ಕೃತ್ಯಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.ಇನ್ನೂ ಇವೆಲ್ಲದಕ್ಕಿಂತ ಮುಖ್ಯವಾಗಿ ಯಾರೇ ಆಗಲಿ ಯಾವುದೇ ಮಾಹಿತಿಯನ್ನು ಕೇಳಿದರೆ ಅವರನ್ನು ಕೇಳಿ ಇವರನ್ನು ಕೇಳಿ ಎಂದು ನೂರಾರು ಕಾರಣಗಳನ್ನು ಹೇಳುತ್ತಾರೆ.ಸರಿ ಆದರೆ ಈ ಒಂದು ಎಸಿಪಿ ಕಚೇರಿಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹೇಗೆ ಹೋಯಿತು. ಆಯುಕ್ತರ ಅಂಗಳ ತಲುಪುವ ಮುಂಚೆ ಈ ಒಂದು ಸಿಸಿ ಟಿವಿ ವಿಡಿಯೋ ವೈರಲ್ ಹೇಗೆ ಆಯಿತು ಇದರ ಹಿಂದೆ ಇಲಾಖೆಯ ಕೆಲ ಕಾಣದ ಕೈಗಳು ಇವೆನಾ ಹೀಗೆ ಹಲವಾರು ಪ್ರಶ್ನೆಗಳಿಗೆ ಆಯುಕ್ತರೇ ಉತ್ತರಿಸಬೇಕು.

ಇದರೊಂದಿಗೆ ಕೆಳ ಮಟ್ಟದ ಸಿಬ್ಬಂದಿ ಯೊಬ್ಬರ ಮೇಲೆ ಯಾವುದೇ ಕಾರಣವನ್ನು ಇಟ್ಟುಕೊಂಡು ಎಸಿಪಿ ಯವರು ಹೀಗೆ ಮಾಡಿ ಇಲಾಖೆಯ ಮಾನವನ್ನು ಹರಾಜು ಮಾಡಿದ್ದಾರೆ. ಇನ್ನೂ ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಎಸಿಪಿ ಅವರ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಇದರೊಂದಿಗೆ ನಿನ್ನೆ ಸಾಕಷ್ಟು ಪ್ರಮಾಣದಲ್ಲಿ ತೆರೆ ಮರೆಯಲ್ಲಿ ಈ ಕುರಿತು ಕೆಲವೊಂದು ಸಂಘಟನೆಗಳ ಮುಖಂಡರು ರಾಜಿ ಸಂಧಾನ ಮಾಡಿದಲು ಮುಂದಾಗಿದ್ದಾರೆ ಆದರೂ ಸಫಲವಾಗಿಲ್ಲ.

ನಾನೇನು ತಪ್ಪು ಮಾಡಿದ್ದೇನೆ ನನಗೆ ಯಾಕೇ ಹಲ್ಲೆ ಮಾಡಿದರು ಎಂದು ಪೇದೆ ಪಟ್ಟು ಹಿಡಿದಿದ್ದಾರೆ. ಅವರ ಬೆನ್ನಿಗೆ ಸಾಕಷ್ಟು ಸಂಘಟನೆಗಳು ನಿಂತುಕೊಂಡಿವೆ. ಸಧ್ಯ ಪೇದೆ ಕೂಡಾ ಮದುವೆಯ ಸಿದ್ದತೆಯಲ್ಲಿದ್ದಾರೆ.ಒಟ್ಟಾರೆ ಇಲಾಖೆಯ ಮಾನ ಹರಾಜು ಮಾಡಿರುವ ಎಸಿಪಿ ಯವರ ಮತ್ತು ವಿಡಿಯೋ ಹರಿಬಿಟ್ಟಿರುವವರ ವಿರುದ್ಧ ಆಯುಕ್ತರ ಗೃಹ ಸಚಿವರು ಕ್ರಮಕೈಗೊಳ್ಳುವುದು ಅವಶ್ಯವಿದೆ.