ಪುಣೆ –
ಸಾಮಾನ್ಯವಾಗಿ ಯಾವುದೇ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಗೆದ್ದ ಅಭ್ಯರ್ಥಿಯನ್ನು ಹೊತ್ತು ಹೂವಿನ ಹಾರ ಹಾಕಿ, ಜೈಕಾರದೊಂದಿಗೆ ಜನಜಂಗುಳಿಯಲ್ಲಿ ಬೆಂಬಲಿಗರು ಮೆರವಣಿಗೆ ಮಾಡುವುದನ್ನು ಕಂಡಿರುತ್ತೇವೆ ನೋಡಿರುತ್ತೆವೆ.ಆದರೆ ಇಲ್ಲೊಬ್ಬ ಮಹಿಳೆ ಚುನಾವಣೆಯಲ್ಲಿ ಗೆದ್ದ ಗಂಡನನ್ನು ಸಂತೋಷದಲ್ಲಿ ಹೆಗಲ ಮೇಲೆ ಹೊತ್ತುಕೊಂಡು ಹೀಗೆ ಗೆಲುವನ್ನು ಸಂಭ್ರಮಿಸದ್ದಾರೆ.ಈ ಮೂಲಕ ಮಹಿಳೆಯೊಬ್ಬರು ಚುನಾವಣೆಯಲ್ಲಿ ತನ್ನ ಗಂಡನ ಗೆಲುವನ್ನು ಹೀಗೆ ಸಂಭ್ರಮಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತನ್ನ ಗಂಡ ಗೆದ್ದ ಖುಷಿಗೆ ಗಂಡನನ್ನು ಹೆಗಲ ಮೇಲೆ ಹೊತ್ತ ಹೆಂಡತಿ ಇಡೀ ಗ್ರಾಮದಲ್ಲಿ ಹೀಗೆ ಮೆರವಣಿಗೆ ಮಾಡಿದ್ದಾರೆ. ಈ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಈ ಫೋಟೊದಲ್ಲಿ ಕಾಣುತ್ತಿರುವ ಮಹಿಳೆಯ ಹೆಸರು ರೇಣುಕಾ ಸಂತೋಷ್ ಗುರಾವ್.ಆಕೆ ಪತಿ ಸಂತೋಷ್ ಗುರಾವ್ ಪುಣೆಯ ಪಾಲು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದು, 221 ಮತಗಳನ್ನು ಪಡೆದು ಗೆದ್ದಿದ್ದಾರೆ. ತನ್ನ ವಿರೋಧಿಗಿಂತ 44 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಸಂತೋಷ್ ಗೆಲುವು ಪ್ರಕಟವಾಗು ತ್ತಿದ್ದಂತೆ ಖುಷಿಯಿಂದ ಬೀಗಿದ ರೇಣುಕಾ, ಸಂತೋಷ್ ನನ್ನು ಹೆಗಲ ಮೇಲೆ ಕೂರಿಸಿಕೊಂಡು ಸಂಭ್ರಮದಿಂದ ಊರೆಲ್ಲಾ ಮೆರವಣಿಗೆ ಮಾಡಿದ್ದಾರೆ.
ರೇಣುಕಾ ತಾನೇ ತನ್ನ ಗಂಡನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆಯಲ್ಲಿ ನಾಲ್ಕು ಮಂದಿ ಜೊತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮೆರವಣಿಗೆ ಮಾಡಿದ್ದಾರೆ. ಗಂಡನ ಗೆಲುವನ್ನು ಹೀಗೆ ಸಂಭ್ರಮಿಸಿದ ಮಹಿಳೆಯ ಈ ಫೋಟೊ ಈಗ ವೈರಲ್ ಆಗಿದೆ.ಜಖ್ ಮಟ್ಟ ದೇವಿ ಗ್ರಾಮವಿಕಾಸ ಸಮಿತಿ ವತಿಯಿಂದ ಸಂತೋಷ್ ಸ್ಪರ್ಧಿಸಿದ್ದರು.