ಧಾರವಾಡ –
ಧಾರವಾಡ ಸಂಚಾರಿ ಪೊಲೀಸರು ಎಂಥವರು ಎಂಬ ಪ್ರಶ್ನೆಗೆ ಈ ಸ್ಟೋರಿನೇ ಸಾಕ್ಷಿ. ತಾವಾಯಿತು ತಮ್ಮ ಕರ್ತವ್ಯವಾಯಿತು ಎಂದುಕೊಂಡು ಸುಮ್ಮ ನೇ ಇರದೇ ಧಾರವಾಡ ಸಂಚಾರಿ ಪೊಲೀಸ್ ಠಾಣೆ ಯ ಇನಸ್ಪೇಕ್ಟರ್ ಮತ್ತು ಎಲ್ಲಾ ಸಿಬ್ಬಂದಿಗಳು ಮಾದರಿಯಾಗಿ ನಮ್ಮ ಮುಂದೆ ನಿಂತುಕೊಳ್ಳುತ್ತಾರೆ.
ಇದಕ್ಕೇ ನಗರದಲ್ಲಿ ಮೇಲಿಂದ ಮೇಲೆ ಇನಸ್ಪೇಕ್ಟರ್ ಮಲಗೌಡ ನಾಯ್ಯರ್ ಮಾರ್ಗದರ್ಶನದಲ್ಲಿ ಸಂಚಾರಿ ಠಾಣೆಯ ಸಿಬ್ಬಂದಿಗಳು ಮಾಡುತ್ತಿರುವ ಕೆಲಸ ಕಾರ್ಯಗಳೇ ಸಾಕ್ಷಿ.
ಹಾಗೇ ಸುಮ್ಮನೇ ಒಮ್ಮೇ ಧಾರವಾಡ ಸಂಚಾರಿ ಪೊಲೀಸರ ಕುರಿತಂತೆ ಅವಲೋಕನ ಮಾಡಿದರೆ ಇವರು ತಮ್ಮ ಕರ್ತವ್ಯದೊಂದಿಗೆ ಮಾಡುತ್ತಿರುವ ಕೆಲಸಗಳು ನಮ್ಮ ಮುಂದೆ ಮಾದರಿಯಾಗಿ ನಿಲ್ಲುತ್ತವೆ.
ಎಲ್ಲಿಯಾದರೂ ಸಿಗ್ನಲ್ ಕಂಬಗಳು ಹಾಳಾಗಿದ್ದರೆ ಕೂಡಲೇ ಅವುಗಳನ್ನು ದುರಸ್ತಿ ಮಾಡಿ ಮಾದರಿ ಯಾಗುವ ನಮ್ಮ ಸಂಚಾರಿ ಸಿಬ್ಬಂದಿಗಳು ಈಗ ಮತ್ತೊಂದು ಮಹಾನ್ ಕಾರ್ಯವನ್ನು ಮಾಡಿದ್ದಾರೆ. ಹೌದು ಇದಕ್ಕೆ ಧಾರವಾಡದ ಹಳೇ ಎಸ್ಪಿ ವೃತ್ತದಲ್ಲಿ ರಸ್ತೆ ಮಧ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಒಳಚರಂಡಿ ಯ ಮುಚ್ಚಳ ಸಂಪೂರ್ಣವಾಗಿ ಹಾಳಾಗಿತ್ತು.
ತೆಗ್ಗು ಬಿದ್ದರೂ ಕೂಡಾ ಸಂಬಂಧಪಟ್ಟವರು ನೋಡಿ ನೋಡಲಾರದಂತೆ ಇದ್ದರೂ ಇನ್ನೂ ಇದನ್ನು ನೋಡಿ ದ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಮಲ್ಲಪ್ಪ ಮಲ್ಲಾಡ ಆಪಾಯಕಾರಿ ಒಳಚ ರಂಡಿ ತೆಗ್ಗಿನ ಪೊಟೊ ದೊಂದಿಗೆ ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದರು.
ಈ ಒಂದು ಮಾಹಿತಿ ಬರುತ್ತಿದ್ದಂತೆ ಕೂಡಲೇ ಸ್ಪಂದಿಸಿದ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಸ್ಥಳಕ್ಕೇ ಆಗಮಿಸಿ ಹಾಳಾಗಿದ್ದ ಒಳಚರಂಡಿ ಮುಚ್ಚ ಳವನ್ನು ಹೊಸದೊಂದನ್ನು ಹಾಕಿ ಅದಕ್ಕೆ ಮತ್ತೆ ಸಿಮೆಂಟ್ ನಿಂದ ದುರಸ್ತಿಯನ್ನು ಮಾಡಿದರು. ಕರ್ತವ್ಯದ ಮೇಲಿದ್ದ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ಮೋತಿಲಾಲ್ ಪವಾರ್ ನಿಂತುಕೊಂಡು ಸರಿಯಾಗಿ ಕಾರ್ಯವನ್ನು ಮಾಡಿಸಿದರು.
ಒಟ್ಟಾರೆ ಧಾರವಾಡ ಸಂಚಾರಿ ಪೊಲೀಸರು ಸದಾ ಯಾವಾಗಲೂ ತಾವಾಯಿತು ತಮ್ಮ ಕರ್ತವ್ಯವಾಯಿ ತು ಎಂದುಕೊಂಡು ಸುಮ್ಮನಿರದೇ ಸದಾಕಾಲವೂ ಜನಸ್ನೇಹಿ ಸಾಮಾಜ ಮುಖಿಯಾಗಿರುತ್ತಾರೆ ಎನ್ನೊದಕ್ಕೆ ಇತ್ತೀಚಿಗೆ ಇನಸ್ಪೇಕ್ಟರ್ ನೇತ್ರತ್ವದಲ್ಲಿ ಇವರು ಮಾಡುತ್ತಿರುವ ಕೆಲಸ ಕಾರ್ಯಗಳೇ ಸಾಕ್ಷಿಯಾಗಿದ್ದು ಧಾರವಾಡ ಜನತೆಯ ಪರವಾಗಿ ಇಂಥಹ ಕೆಲಸ ಕಾರ್ಯಗಳನ್ನು ಮಾಡುತ್ತಾ ನಮ್ಮ ಮಧ್ಯೆ ಇರುವ ಇವರಿಗೆ ಅಭಿನಂದನೆಗಳು ಇಂಥಹ ಕೆಲಸ ಕಾರ್ಯಗಳನ್ನು ಇನ್ನೂ ಮುಂದುವರೆಯಲಿ ಎಂಬೊದೆ ನಮ್ಮ ಆಶಯ