ಶಿಕ್ಷಕ ನಾಡಿನ ಮಕ್ಕಳ ಸಾಹಿತ್ಯದ ಹಿರಿಯ ಜೀವಿ ಎಂ ಡಿ ಗೋಗೆರಿ ನಿಧನ – ಬಡವಾಯಿತು ಮಕ್ಕಳ ಸಾಹಿತ್ಯ ಲೋಕ…..

Suddi Sante Desk

ಧಾರವಾಡ –

ಮಕ್ಕಳ ಸಾಹಿತ್ಯ ಲೋಕದ ಕ್ಷೇತ್ರದ ಹಿರಿಯ ಸಾಹಿತಿ ಕನ್ನಡ ನಾಡಿನ ಹಿರಿಯರು ಮಕ್ಕಳ ಸಾಹಿತಿಗಳು ಹಾಸ್ಯ ಸಾಹಿತಿಗಳು ಎಂ ಡಿ ಗೋಗೇರಿ ನಿಧನರಾಗಿ ದ್ದಾರೆ‌.ಕಳೆದ ಹಲವಾರು ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದ ಇವರು ನಿಧನರಾಗಿದ್ದಾರೆ‌.ಇನ್ನೂ ಇವರ ಅಗಲಿಕೆಯಿಂದಾಗಿ ಸಾಹಿತ್ಯ ಕ್ಷೇತ್ರಕ್ಕೆ ತುಂಬ ಲಾರದ ನಷ್ಟವಾಗಿದೆ.

ಎಂ.ಡಿ .ಗೋಗೆರಿಯವರ ನಿಧನದಿಂದ ಮಕ್ಕಳ ಸಾಹಿತ್ಯ ಲೋಕಕ್ಕೆ ತುಂಬಲಾರದ ಹಾನಿಯಾಗಿದೆ 21-1-1942 ರೋಣ ತಾಲ್ಲೂಕು ಗೋಗೇರಿಯಲ್ಲಿ ಹುಟ್ಟಿದ ಇವರು ತಂದೆ ದಸ್ತಗೀರ ಸಾಹೇಬ ತಾಯಿ ಅಲ್ಲಮ್ಮಾ ಫಂಡು ಸಾಹೇಬ ಅಂಗಡಿ ಎಂಬುವರ ಗಾಂವಠಿ ಶಾಲೆಯಲ್ಲಿ ನಾಲ್ಕನೆಯ ತರಗತಿ ಪಾಸು. ಕುರುಡಿಗಿ, ನಿಡಗುಂದಿ, ರೋಣದಲ್ಲಿ ಓದಿ ಮುಲ್ಕಿ ಪರೀಕ್ಷೆ ಪಾಸು ಮಾಡಿ ನಂತರ ಹೈಸ್ಕೂಲ್ ವಿದ್ಯಾ ಭ್ಯಾಸ ಗಜೇಂದ್ರಗಡದಲ್ಲಿ. ಹುಬ್ಬಳ್ಳಿಯಲ್ಲಿ ಟಿ.ಸಿ. ಎಚ್. ಟ್ರೈನಿಂಗ್. ರಾಯಚೂರು ಜಿಲ್ಲೆಯ ದೇವ ದುರ್ಗ ತಾಲ್ಲೂಕಿನ ಬೊಮ್ಮನ ಹಳ್ಳಿಯಲ್ಲಿ ಶಿಕ್ಷಕ ವೃತ್ತಿ ಆರಂಭ ಮಾಡಿದರು

  • ಸ್ವಂತ ಜಿಲ್ಲೆಯಾದ ಧಾರವಾಡ ಜಿಲ್ಲೆಯಲ್ಲೇ ಶಿಕ್ಷಕ ವೃತ್ತಿಗಾಗಿ ಹುಡುಕಾಟ. ಅದೃಷ್ಟದಿಂದ ಸಂದರ್ಶನಕ್ಕೆ ಕರೆ. ಧಾರವಾಡ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಶೀರನ ಹಳ್ಳಿಯಲ್ಲಿ ಶಿಕ್ಷಕರಾಗಿ ನೇಮಕಾತಿ ಇದ್ದ ಶಾಲೆ ಬಿಟ್ಟರೆ ಶಾಲೆ ಮುಚ್ಚುತ್ತಾ ರೆಂದು ರಜೆ ಬರೆದು ಸ್ವಂತ ಊರಿಗೆ. ನಂತರ ರಿಜಿಸ್ಟರ್ ಅಂಚೆಯ ಮೂಲಕ ರಾಜೀನಾಮೆ ಪತ್ರ ರವಾನೆ. ಬೊಮ್ಮನಹಳ್ಳಿಯ ರೂಮಿನಲ್ಲಿದ್ದ ಹಾಸಿಗೆ, ಸ್ಟೌವ್ ಬಟ್ಟೆ-ಬರೆ ದೇವರಪಾಲು.
  • ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಲಿಸುತ್ತ, ಕಲಿಯುತ್ತ ಬೆಳೆದ ಸಾಹಿತ್ಯದ ಗೀಳು. ವಿದ್ಯಾ ರ್ಥಿಗಳಿಗೆ ಅಭಿನಯ,ಗೀತೆ, ಪ್ರಹಸನ ತರಬೇತಿ. ಆ ಶಾಲೆಯಿಂದಲೂ ಎತ್ತಂಗಡಿ. ಕಲಘಟಗಿ ತಾಲ್ಲೂಕಿನ ಮಡಕಿ ಹೊನ್ನಳ್ಳಿಗೆ ಸಹಾಯ ಶಿಕ್ಷಕರಾಗಿ ನೇಮಕಾತಿ. ಕಾವ್ಯಕೃಷಿ ಪ್ರಾರಂಭ. ಮೊಟ್ಟಮೊದಲ ಕವನ ಸಂಕಲನ ಜೀವಜೇನು ಪ್ರಕಟ. ಮತ್ತೆ ಹುಬ್ಬಳ್ಳಿಗೆ ವರ್ಗಾವಣೆ. ಬಿಡುವಿಲ್ಲದೆ ಕವಿಗೋಷ್ಠಿ ರೇಡಿಯೋ ಕಾರ್ಯಕ್ರಮಗಳು.
  • ಕಲಿಸುವುದರ ನಡುವೆಯೂ ಕಲಿಯುತ್ತಾ ಮೈಸೂರು ವಿಶ್ವವಿದ್ಯಾಲಯ, ಧಾರವಾಡ ವಿಶ್ವವಿದ್ಯಾಲಯಗಳ ಬಾಹ್ಯ ವಿದ್ಯಾರ್ಥಿ. ಎಂ.ಎ. ತೇರ್ಗಡೆ. ಹಲವಾರು ಕವಿಗೋಷ್ಠಿ ಗಳಲ್ಲಿ ಕವನ ವಾಚನ. ಪತ್ರಿಕೆಗಳಲ್ಲಿ ಹಾಸ್ಯ ಬರಹಗಳೂ ಪ್ರಕಟ.ಪ್ರಕಟಿತ ಪುಸ್ತಕಗಳು ಆರು ಕವನ ಸಂಕಲನಗಳು ಮೂರು ಮಕ್ಕಳ ಪದ್ಯ ಗಳು, ಮೂರು ಏಕಾಂಕ ನಾಟಕಗಳು, ಸಾಹೇ ಬರ ಸಿಪಾಯಿ ನಮಸ್ಕಾರ, ಕವಿಪತ್ನಿಯರ ಸಂದರ್ಶನ ಮತ್ತು ಪುರುಷ ಶೋಷಣೆ ಮೊದ ಲಾದ ಹಾಸ್ಯ ಸಂಕಲನಗಳು.ಹುಬ್ಬಳ್ಳಿಯಿಂದ ಹೂಬಳ್ಳಿಗೆ ಸ್ವಾನುಭವದ ಸಂ ಕಥನ ಪ್ರಕಟಣೆ.

ಸಾಧನೆಗೆ ಅರೆಸಿ ಬಂದ ಪ್ರಶಸ್ತಿಗಳು ಗೌರವಗಳು

  1. ಹುಬ್ಬಳ್ಳಿ ಮೂರು ಸಾವಿರ ಮಠ ಪ್ರಶಸ್ತಿ ಆದರ್ಶ ಶಿಕ್ಷಕ ಪ್ರಶಸ್ತಿ, ಹರ್ಡೇಕರ್ ಮಂಜಪ್ಪ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರ ಮಡಿಲಿಗೆ ಅರೆಸಿ ಬಂದಿವೆ

ಇನ್ನೂ ಇವರ ನಿಧನಕ್ಕೆ ನಾಡಿನ ಜಿಲ್ಲೆಯ ಹಿರಿಯ ಸಾಹಿತಿಗಳು ಅದರಲ್ಲೂ ವಿಶೇಷವಾಗಿ ಶಿಕ್ಷಕ ಬಂಧು ಗಳಾದ ಶಿಕ್ಷಕ ಬಂಧುಗಳಾದ ಎಲ್ ಐ ಲಕ್ಕಮ್ಮನವ ರ, ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾ ಯ್ಕರ್,ಎಸ್ ಎಫ್ ಪಾಟೀಲ,ರವಿ ಬಂಗೇನವರ, ರ,ಗೋವಿಂದ ಜುಜಾರೆ ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲವಾಯಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಹನಿಗೊಂಡ, ಅಶೋಕ ಸಜ್ಜನ,ರುಸ್ತಂ ಕನವಾಡೆ ಸೇರಿದಂತೆ ಹಲ ವರು ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ. ಸಂತಾಪವನ್ನು ಸೂಚಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.