9 ಕಿಮಿ ಉದ್ದ,9 ಅಡಿ ಅಗಲದ ತಿರಂಗಾ ಮಹಾ ರ‍್ಯಾಲಿ ಗೆ ಸಿದ್ದಗೊಂಡ ಕಲಘಟಗಿ ಮಾಜಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ನಡೆಯಲಿದೆ ವಿಶ್ವದಾಖಲೆಯ ಕಾರ್ಯಕ್ರಮ…..

Suddi Sante Desk

ಕಲಘಟಗಿ –

ಅಧಿಕಾರದಲ್ಲಿ ಇರಲಿ ಇಲ್ಲದಿರಲಿ ಸದಾ ಒಂದಿಲ್ಲೊಂದು ವಿಶೇಷ ಸಮಾಜ ಮುಖಿ ಕಾರ್ಯಕ್ರಮದ ಮೂಲಕ ಗಮನ ಸೆಳೆಯುತ್ತಿರುವ ಮಾಜಿ ಸಚಿವ ಸಂತೋಷ ಲಾಡ್ ಈಗ ಮತ್ತೊಂದು ಐತಿಹಾಸಿಕ ಕಾರ್ಯಕ್ರಮದ ಮೂಲಕ ಕಲಘಟಗಿ ಯಲ್ಲಿ ನಾಳೆ ವಿಶೇಷ ದಾಖಲೆ ಯನ್ನು ಬರೆಯಲು ಮುಂದಾಗಲಿದ್ದಾರೆ ಹೌದು ಆಗಸ್ಟ್ 15 2022ರ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದಂದು ಕಲಘಟಗಿ-ಅಳ್ನಾವರ ಮತಕ್ಷೇತ್ರದ ಕಲಘಟಗಿ ಪಟ್ಟಣ ವಿಶ್ವದಾಖಲೆಯ ಕ್ಷಣಕ್ಕೆ ಸಾಕ್ಷಿಯಾಗಲಿದೆ

ಸ್ವಾತಂತ್ರ್ಯ ಭಾರತದ 75ನೇ ವರ್ಷಾಚರಣೆಯ ಸಂಭ್ರಮದ ದಿನದಂದು ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಬರೋಬ್ಬರಿ 9 ಕಿಮಿ ಉದ್ದ, 9 ಅಡಿ ಅಗಲದ ತ್ರಿವರ್ಣ ಧ್ವಜ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು ಇದರ ಸಿದ್ದತೆ ಪೂರ್ಣ ಗೊಂಡಿದ್ದು ಮಾಜಿ ಸಚಿವ ಸಂತೋಷ ಲಾಡ್ ಪರಿಶೀಲನೆ ನಡೆಸಿದರು.

ರ‍್ಯಾಲಿಯುದ್ದಕ್ಕೂ 300ಕ್ಕೂ ಹೆಚ್ಚಿನ ಕಲಾತಂಡಗಳಿಂದ ಕಲಾ ಪ್ರದರ್ಶನ ಕಣ್ಮನ ಸೆಳೆಯಲಿವೆ 6 ಬೃಹತ್ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ 10,000 ತಾಯಂದಿರು ಭಾರತ ಮಾತೆಗೆ ಪೂರ್ಣ ಕುಂಭ ಗೌರವ ಸಲ್ಲಿಸಲಿದ್ದಾರೆ

2021ರ ಆಗಸ್ಟ್ 15 ರಂದು ಕಲಘಟಗಿ ಪಟ್ಟಣದಲ್ಲಿ ನಡೆದಿದ್ದ 2 ಕಿ ಮೀ ಉದ್ದ ಹಾಗೂ 9 ಅಡಿ ಅಗಲದ ಬೃಹತ್ ತಿರಂಗಾ ರ‍್ಯಾಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವಕ್ಕೆ ಪಾತ್ರವಾಗಿತ್ತು.ಈಗ ವಿಶ್ವ ದಾಖಲೆಯಲ್ಲಿ ಕಲಘಟಗಿ ಅಳ್ನಾವರ ಮತಕ್ಷೇತ್ರದ ಹೆಸರು ಬರೆಸುವ ಸಮಯ ಬಂದಿದೆ

ಸಮಯ ಬೆಳಿಗ್ಗೆ 9.30ಕ್ಕೆ ಆರಂಭ

ಪ್ರಿಯ ಮಿತ್ರರೇ ಬನ್ನಿ ಗಿನ್ನಿಸ್ ದಾಖಲೆಯ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿ.ಸ್ವಾತಂತ್ರ್ಯ ದಿನದ ಅಮೃತ ಮಹೋ ತ್ಸವವನ್ನು ಸುವರ್ಣಾಕ್ಷರಗಳಲ್ಲಿ ಬರೆಯುವ ಐತಿಹಾಸಿಕ ಕ್ಷಣದಲ್ಲಿ ಪಾಲ್ಗೊಳ್ಳ ಎಂದು ಸಂತೋಷ ಲಾಡ್ ಕರೆ ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.