ಯುವಕನಿಗೆ ಚಾಕು ಇರಿತ
ಹುಬ್ಬಳ್ಳಿ –
ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.ಚಾಕುವಿನಿಂದ ಬೆನ್ನಿನ ಭಾಗಕ್ಕೆ ಇರಿತ ಮಾಡಲಾಗಿದೆ.ಇನ್ನೂ ನಗರದ ವಿದ್ಯಾನಗರದ ಲೋಕಪ್ಪನ ಹಕ್ಕಲದ ವಿಘ್ನೇಶ್ವರ ಶಾಲೆ ಮೈದಾನದ ಬಳಿ ಈ ಒಂದು ಘಟನೆ ನಡೆದಿದ್ದು ವಿಜಯ ಪರಶುರಾಮ ಬಾಗನ್ನವರ (24) ಎಂಬ ಯುವಕನಿಗೆ ಚಾಕು ಇರಿಯಲಾಗಿದೆ.

ಚಾಕು ಇರಿತದಿಂದ ವಿಜಯ ತೀವ್ರವಾಗಿ ಗಾಯಗೊಂಡಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.ಹೆಗ್ಗೇರಿಯ ಸಲೀಂ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ.ಆರು ತಿಂಗಳ ಹಿಂದೆ ಸಲೀಂ ನ ಹೆಂಡತಿಯ ಕೈ ಹಿಡಿದು ರಸ್ತೆಯಲ್ಲಿ ಎಳೆದಿದ್ದರು ಅಲ್ಲದೇ ಜಗಳ ತೆಗೆದಿದ್ದರು.ಆರು ತಿಂಗಳ ಹಿಂದೆ ನಡೆದ ಈ ಒಂದು ಘಟನೆ ಕುರಿತು ಸಲೀಂ ಇಂದು ವಿಜಯನನ್ನು ವಿಚಾರಣೆ ಮಾಡಲು ಬಂದಾಗ ಮಾತಿಗೆ ಮಾತು ಬೆಳೆದು ಕೊನೆಗೆ ಸಲೀಂ ಆಗ ಎದುರಿಗೆ ಇದ್ದ ವಿಜಯನಿಗೆ ಚಾಕುವಿನಿಂದ ಇರಿದಿದ್ದಾನೆ.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈಗ ಸಲೀಂ ವಿಜಯನಿಗೆ ಚಾಕು ಇರಿದು ಹಳೇಯ ದ್ವೇಷವನ್ನು ತಿರಿಸಿಕೊಂಡಿದ್ದಾನೆ.ಗಾಯಾಳು ವಿಜಯ ಕಿಮ್ಸ್ ಗೆ ದಾಖಲು ಮಾಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಸುದ್ದಿ ಸಂತೆ ಗೆ ಹೇಳಿದ್ದಾರೆ.ಇನ್ನೂ ವಿಷಯ ತಿಳಿದ ವಿದ್ಯಾನಗರದ ಪೊಲೀಸ್ ಇನ್ಸ್ಪೆಕ್ಟರ್ ಆನಂದ ವನಕುದರಿ ಮತ್ತು ಸಿಬ್ಬಂದಿ ಪರಿಶೀಲಿಸಿದರು.ಅಲ್ಲದೇ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮಾಡ್ತಾ ಇದ್ದಾರೆ.