ಕಲಘಟಗಿ –
ಮನೆಯ ಮುಂದೆ ನಿಲ್ಲಿಸಲಾಗಿದ್ದ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ ಕಳ್ಳನನ್ನು ಕಲಘಟಗಿ ಪೊಲೀಸರು ಬಂಧಿಸಿದ್ದಾರೆ. ಕಲಘಟಗಿಯ ನಿವಾಸಿ ಮಹಮ್ಮದ್ ರಫಿಕ್ ಸನದಿ ತಮ್ಮ ಬೈಕ್ ಕಳ್ಳತವಾಗಿದೆ ಎಂದು ಕಲಘಟಗಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ಇವರ ದೂರನ್ನು ದಾಖಲು ಮಾಡಿಕೊಂಡ ಕಲಘಟಗಿ ಪೊಲೀಸರು ತನಿಖೆ ಆರಂಭ ಮಾಡಿದ್ರು. ತನಿಖೆ ಮಾಡುವ ಸಮಯದಲ್ಲಿ ನಗರದಲ್ಲಿ ಕದ್ದ ಬೈಕ್ ಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಯುವಕನನ್ನು ವಿಚಾರಣೆ ಮಾಡಿದಾಗ ಕದ್ದ ಬೈಕ್ ಗಳನ್ನು ಮಾರಾಟ ಮಾಡುವ ವಿಚಾರ ಕಲಘಟಗಿ ಪೊಲೀಸರಿಗೆ ಸಿಕ್ಕಿದೆ. ಕೈಗೆ ರೇಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಖತರ್ನಾಕ್ ಕಳ್ಳನನ್ನು ವಿಚಾರಣೆ ಮಾಡಿದಾಗ ಕದ್ದ ಬೈಕ್ ಗಳ ಪಟ್ಟಿಯನ್ನೇ ಪೊಲೀಸರಿಗೆ ನೀಡಿದ್ದಾನೆ. ಅದರಲ್ಲಿ ದೂರು ನೀಡಿದ ಮಹಮ್ಮದ್ ಸನದಿ ಬೇಕ್ ಕೂಡಾ ಸೇರಿದ್ದು ತನಿಖೆ ಮಾಡುತ್ತಾ ಮಾಡುತ್ತಾ ಪೊಲೀಸರಿಗೆ ಖತರ್ನಾಕ್ ಬೈಕ್ ಕಳ್ಳನ ಜಾತಕ ಸಿಕ್ಕಿದೆ. ದೂರು ನೀಡಿದ ಇದೇ ಪ್ರಕರಣದಲ್ಲಿ ತನಿಖೆ ಆರಂಭ ಮಾಡಿದ ಕಲಘಟಗಿ ಪೊಲೀಸರಿಗೆ ದೊಡ್ಡ ಶಾಕ್ ಆಗಿದ್ದು ಕೊನೆಗೂ ಕಲಘಟಗಿ ನಿವಾಸಿ ಜೈಲಾನಿ ಬಾಷಾಸಾಬ ಗಂಜಿಗಟ್ಟಿ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನು 19 ವಯಸ್ಸಿನ ಯುವಕನಾಗಿದ್ದು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಖತರ್ನಾಕ್ ಕಳ್ಳ ಹೆಸರಿಗೆ ಮಾತ್ರ ಮಾಡೋದು ಕೂಲಿ ಕೆಲಸ ಆದರೆ ಮಾಡೊದೇ ಬೈಕ್ ಕಳ್ಳತನವನ್ನು. ಕಲಘಟಗಿ ಪಟ್ಟಣದ ಬಸವೇಶ್ವರ ನಗರದ ನಿವಾಸಿಯಾಗಿದ್ದು ಕಳ್ಳತನ ಮಾಡಿದ ಬೈಕ್ ಗಳನ್ನು ಕಲಘಟಗಿಯಲ್ಲಿ ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದು ಈಗ ಜೈಲು ಸೇರಿದ್ದಾನೆ. ಬಂಧಿತನಿಂದ ಕಲಘಟಗಿಯಲ್ಲಿ 2 ಇನ್ನೂ ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿದ್ದ 7 ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ ಕೃಷ್ಣಕಾಂತ , ಡಿವೈಎಸ್ಪಿ ಎಸ್ ಬಿ ಸಂಕದ ಇವರ ಮಾರ್ಗದರ್ಶನದಲ್ಲಿ ಇನಸ್ಪೇಕ್ಟರ್ ವಿಜಯ ಬಿರಾದಾರ ಸಿಬ್ಬಂದಿಗಳಾದ ಎಎಸ್ಐ ಕೆ ಎಮ್ ಮಠಪತಿ, ಎಸ್ ಡಿ ಮಲ್ಲನಗೌಡರ ,ಎನ್ ಎಮ್ ಹೊನ್ನಪ್ಪನವರ, ಎಮ್ ಎಲ್ ಪಾಶ್ಚಾಪೂರ ,ಚನ್ನಪ್ಪ ಬಳ್ಳೊಳ್ಳಿ ,ಎನ್ ಎಮ್ ಸಂಶಿ, ಎನ್ ಪಿ ಸಣ್ಣಮೇಟಿ .ಎನ್ ಬಿ ಬೋಗೂರ ,ಶಿವಾನಂದ ಕಾಂಬಳೆ. ಹಾಗೂ ಜಿಲ್ಲಾ ಗಣಕಯಂತ್ರ ವಿಭಾಗದ ನವಲೂರು ಅವರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಶ್ವಿಯಾಗಿದ್ದಾರೆ.