ಅಂದು ಕುಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿ ಈಗ ರಾಷ್ಟ್ರಪತಿ ಅಭ್ಯರ್ಥಿ – ದೇಶದ ಪ್ರಥಮ ಪ್ರಜೆ ಯಾಗಲಿದ್ದಾರೆ ಬುಡಕಟ್ಟು ಸಮುದಾಯದ ಮಹಿಳೆ…..

Suddi Sante Desk

ಹೊಸದಿಲ್ಲಿ –

ರಾಷ್ಟ್ರಪತಿ ಚುನಾವಣೆಗೆ ಆಡಳಿತಾರೂಢ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಒಡಿಶಾದ ಬುಡಕಟ್ಟು ಜನಾಂಗದ ಮಹಿಳಾ ನಾಯಕಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಿದ ಬಳಿಕ ಅಭ್ಯರ್ಥಿಯನ್ನು ಘೋಷಿಸಿದ್ದಾರೆ.64 ವರ್ಷದ ದ್ರೌಪದಿ ಮುರ್ಮು ಅವರು ಈ ಬಾರಿ ಚುನಾಯಿ ತರಾದರೆ ಭಾರತದ ರಾಷ್ಟ್ರಪತಿಯಾದ ಮೊದಲ ಬುಡ ಕಟ್ಟು ಮಹಿಳೆಯಾಗಲಿದ್ದಾರೆ.ಹಾಗೆಯೆ ದೇಶದ ಎರಡನೇ ಮಹಿಳಾ ರಾಷ್ಟ್ರಪತಿಯಾಗಲಿದ್ದಾರೆ.

ಜಾರ್ಖಂಡ್‌ ನ ಒಂಭತ್ತನೇ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿರುವ ಮುರ್ಮು ಅವರು ಒಡಿಶಾದಿಂದ ಎರಡು ಬಾರಿ ಬಿಜೆಪಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಬಿಜೆಡಿ ಯು ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದಾಗ ನವೀನ್ ಪಟ್ನಾಯಕ್ ಸಂಪುಟದಲ್ಲಿ ಸಚಿವರಾಗಿದ್ದರು. ಮಾರ್ಚ್ 6, 2000 ದಿಂದ ಆಗಸ್ಟ್ 6, 2002 ರವರೆಗೆ ವಾಣಿಜ್ಯ ಮತ್ತು ಸಾರಿಗೆ ಸಚಿವರಾಗಿದ್ದರು ಆಗಸ್ಟ್ 6, 2002 ರಿಂದ ಮೇ 16, 2004 ರವರೆಗೆ ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲ ರಾಗಿರುವ ಮುರ್ಮು ಅವರು ರಾಜ್ಯವೊಂದರಲ್ಲಿ ಗವರ್ನರ್ ಆಗಿ ನೇಮಕಗೊಂಡ ಒಡಿಶಾದ ಮೊದಲ ಬುಡಕಟ್ಟು ನಾಯಕಿ ಕೂಡಾ ಆಗಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿ ಸಿದ ದ್ರೌಪದಿ ಅವರು 1997ರಲ್ಲಿ ರಾಜಕೀಯಕ್ಕೆ ಬಂದರು ಅದೇ ವರ್ಷ ಬಿಜೆಪಿಯಿಂದ ಕೌನ್ಸಿಲರ್ ಆದರು ನಂತರ ರಾಯರಂಗಪುರ ರಾಷ್ಟ್ರೀಯ ಸಲಹಾ ಮಂಡಳಿ ಅಥವಾ NAC ನ ಉಪಾಧ್ಯಕ್ಷರಾಗಿದ್ದರು.2013ರಲ್ಲಿ ಅವರು ಪಕ್ಷದ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಯಾಗಿ ಭುವನೇಶ್ವರದ ರಮಾ ದೇವಿ ಮಹಿಳಾ ಕಾಲೇಜಿ ನಲ್ಲಿ ಕಲಾ ಪದವಿ ಪಡೆದ ಅವರಿಗೆ ರಾಜಕೀಯ ಜೀವನ ದಲ್ಲಿ ಎರಡುವರೆ ದಶಕಗಳ ಅನುಭವವಿದೆ.

ಬಿಜೆಪಿ ಸಂಸದೀಯ ಮಂಡಳಿಯು ರಾಷ್ಟ್ರಪತಿ ಅಭ್ಯರ್ಥಿ ಗೆ 20 ಹೆಸರುಗಳನ್ನು ಚರ್ಚಿಸಿ ಬಳಿಕ ದ್ರೌಪದಿ ಅವರ ಹೆಸರನ್ನು ಅಂತಿಮಗೊಳಿಸಿದೆ.ಪೂರ್ವ ಭಾರತದಿಂದ ಒಬ್ಬ ಬುಡಕಟ್ಟು ಮಹಿಳೆಯನ್ನು ಆಯ್ಕೆ ಮಾಡಲು ನಿರ್ಧರಿಸ ಲಾಗಿದೆ ಎಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಹೇಳಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.