ಹುಬ್ಬಳ್ಳಿ –
ಹುಬ್ಬಳ್ಳಿಯ ಹೊಸೂರ ವೃತ್ತದಲ್ಲಿರುವ ರೇಣುಕಾ HP ಕಂಪನಿಯ ಗ್ಯಾಸ್ ಏಜೆನ್ಸಿ ಏಕಾಏಕಿಯಾಗಿ ಬಾಗಿಲು ಹಾಕಿದೆ. ಕಳೆದ ಒಂದು ತಿಂಗಳಿನಿಂದ ಗ್ಯಾಸ್ ಗಾಗಿ ಆನ್ ಲೈನ್ ಪೆಮೆಂಟ್ ಮಾಡಿ ಮನೆಗೆ ಅವಾಗ ಇವಾಗ ಸಿಲಿಂಡರ್ ಬರುತ್ತದೆ ಎಂದುಕೊಂಡು ಕಾಯುತ್ತಿದ್ದವರು ಈಗ ಏನು ಇಲ್ಲದೇ ಕಂಗಾಲಾಗಿದ್ದಾರೆ.
ಒಂದು ತಿಂಗಳ ಹಿಂದೆ ಆನ್ ಲೈನ್ ನಲ್ಲಿ ಸಿಲಿಂಡರ್ ಬುಕ್ ಮಾಡಿ ಕಾದು ಕಾದು ಸುಸ್ತಾಗಿ ಕೊನೆಗೆ ಅಂಗಡಿ ಮುಂದೆ ಸಾರ್ವಜನಿಕರು ಬಂದು ನೋಡಿದಾಗ ಅಂಗಡಿ ಬಂದ್ ಆಗಿದೆ.
ಇದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ರೇಣುಕಾ ಗ್ಯಾಸ್ ಏಜೆನ್ಸಿ ಗೆ ಗ್ರಾಹಕರು ಮುಂಚಿತವಾಗಿ ಆನ್ ಲೈನ್ ನಲ್ಲಿ ಪೆಮೆಂಟ್ ಮಾಡಿದ್ದಾರೆ ಹಾಗೇ ಬುಕ್ ಮಾಡಿದ್ದಾರೆ.
ಹೀಗಾಗಿ ಹಣವೂ ಇಲ್ಲದೇ ಸಿಲಿಂಡರ್ ಇಲ್ಲದೇ ಅಂಗಡಿ ಮುಂದೆ ಬಂದು ತಮ್ಮ ಗೋಳನ್ನು ತೊಡಿಕೊಳ್ಳುತ್ತಿದ್ದು ಈ ಕುರಿತಂತೆ ಅಂಗಡಿ ಶೆಟರ್ಸ್ ಮೇಲೆ ತಾಂತ್ರಿಕ ಸಮಸ್ಯೆಯಿಂದ ಅಂಗಡಿಯನ್ನು ಬಂದ್ ಮಾಡಲಾಗಿದೆ ಎಂದು ಹಾಕಿದ್ದು ಇನ್ನೂ ಪೊನ್ ನಂಬರ್ ಗೆ ಸಂಪರ್ಕ ಮಾಡಿದರೂ ಯಾವುದು ಸಿಗುತ್ತಿಲ್ಲ ಹೀಗಾಗಿ ಆನ್ ಲೈನ್ ನಲ್ಲಿ ಮುಂಚಿತವಾಗಿ ಪೆಮೆಂಟ್ ಮಾಡಿ ಈಗ ಸಿಲಿಂಡರ್ ಇಲ್ಲದೇ ಹಣವೂ ಇಲ್ಲದೇ ಸಾರ್ವಜನಿಕರು ಪರದಾಡುತ್ತಿದ್ದು ಅಂಗಡಿ ಮುಂದೆ ಜಮಾವಣೆ ಯಾಗಿದ್ದು ನಿಜವಾದ ಕಾರಣ ಏನು ಎಂಬುದನ್ನು ಮಾಲಿಕರು ಉತ್ತರಿಸಬೇಕು.