ಹುಬ್ಬಳ್ಳಿ –
ಕರ್ತ್ಯವ್ಯ ನಿರತ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ನ್ಯಾಯವಾದಿ ನಡುವೆ ಮಾತಿನ ಚಕಮಕಿ ನಡೆದ ಘಟನೆ ಹುಬ್ಬಳ್ಳಿಯ ನವನಗರದಲ್ಲಿ ನಡೆದಿದೆ.ನವನಗರ ಕರ್ನಾಟಕ ಸರ್ಕಲ್ ಬಳಿ ಘಟನೆ ಈ ಒಂದು ಗಲಾಟೆ ನಡೆದಿದೆ.ಘಟನೆ ನಡೆದ ವಿವರ ನೋಡಿದ್ರೆ ಆಸ್ತಿ ವಿಚಾರ ಕುರಿತಂತೆ ಮೂವರು ಸೇರಿಕೊಂಡು ರಸ್ತೆ ಮಧ್ಯದಲ್ಲಿ ಕೈ ಕೈ ಮೀಗಿಲಾಯಿಸುತ್ತಾ ಗಲಾಟೆ ಮಾಡಿಕೊಳ್ಳುತ್ತಿದ್ದರಂತೆ ಈ ಒಂದು ಮಾಹಿತಿಯನ್ನು ಯಾರೋ ಸಾರ್ವಜನಿಕರು ಪೊಲೀಸ್ ಠಾಣೆಗೆ ನೀಡಿದ್ದಾರೆ. ಮಾಹಿತಿ ಬರುತ್ತಿದ್ತಂತೆ ತಮ್ಮ ಸಿಬ್ಬಂದ್ದಿಗಳೊಂದಿಗೆ ಸ್ಥಳಕ್ಕೇ ನವನಗರ ಇನಸ್ಪೇಕ್ಟರ್ ಪ್ರಭು ಸೂರಿನ್ ಬಂದಿದ್ದಾರೆ.ಸ್ಥಳದಲ್ಲಿ ವಿನೋದ್ ಪಾಟೀಲ್, ರೌಡಿಶೀಟರ್ ಪ್ರವೀಣ್ ಪೂಜಾರಿ, ಮಲ್ಲಯ್ಯ ಹಿರೇಮಠ ನಡುವೆ ಆಸ್ತಿ ವಿಚಾರಕ್ಕೇ ಜಗಳವಾಗುತ್ತಿತ್ತು. ಈ ಒಂದು ಜಗಳವನ್ನು ಬಿಡಿಸಿ ಮನೆಗೆ ಹೋಗಿ ಎಂದು ಹೇಳಿದ್ದಾರೆ.ಇದರಲ್ಲಿ ಕೆಲವರು ಮನೆಗೆ ಹೋದ್ರೆ ಇನ್ನೂ ವಿನೋದ್ ಪಾಟೀಲ್ ಇನಸ್ಪೇಕ್ಟರ್ ಗೆ ಮತ್ತು ಪೊಲೀಸ್ ಸಿಬ್ಬಂದ್ದಿಯೊಂದಿಗೆ ಮಾತಿನ ಚಕಮಕಿ ಮಾಡಿದ್ದಾರೆ.
ಜಗಳವನ್ನು ಕಂಡು ಬಿಡಿಸಲು ಬಂದ ಪೊಲೀಸರ ಮೇಲೆ ಆವಾಜ್ ಹಾಕಿದ್ದಾರೆ ವಿನೋದ್.ಠಾಣೆಗೆ ಬಂದು ಬಗೆಹಸಿಕೊಳ್ಳಿ ಎಂದರು ಬರೋಕಾಗಲ್ಲ ಎಂದು ತೆರಳಿದ್ದರಂತೆ. ಇನ್ನೂ ವಿನೋದ್.ಜನರ ನಡುವೆಯೇ ಏನು ಮಾಡೋಕಾಗಲ್ಲ ನಿಮಗೆ ಎಂದು ಆವಾಜ್ ಹಾಕಿದ್ದಾನೆ.
ಅಲ್ಲದೇ. ಕರ್ತವ್ಯ ನಿರತ ಪೊಲೀಸರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.ನಂತರ ವಿನೋದಪಾಟೀಲ್ ಮತ್ತು ಇನ್ನಿಬ್ಬರನ್ನು ನವನಗರ ಎಪಿಎಂಸಿ ಪೊಲೀಸರು ಕರೆದುಕೊಂಡೋ ಹೋಗಿದ್ದಾರೆ. ವೈಧ್ಯಕೀಯ ಪರೀಕ್ಷೆ ಮಾಡಿ ಈ ಮೂವರ ಮೇಲೆ ನವನಗರ ಇನಸ್ಪೇಕ್ಟರ್ ದೂರು ದಾಖಲು ಮಾಡಿದ್ದಾರೆ.
ಇನ್ನೂ ಆಸ್ಪತ್ರೆಯಿಂದ ಠಾಣೆಗೆ ಬರುವಾದ ವಿನೋದ್ ಪಾಟೀಲ್ ಬೆಂಗಾವಲಿನಲ್ಲಿದ್ದ ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದು ಬಂಧನಕ್ಕೇ ಪೊಲೀಸರು ಜಾಲ ಬೀಸಿದ್ದಾರೆ.