ಅಳ್ನಾವರ –
ಶಿಕ್ಷಕಿಯೊಬ್ಬರ ಮನೆ ಕಳ್ಳತನ ನಡೆದ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ಎಮ್ ಸಿ ಪ್ಲಾಟ್ ನಲ್ಲಿ ಈ ಒಂದು ಘಟನೆ ನಡೆದಿದೆ.

ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪ್ರೀಯಾಂಕ ಜಾನ್ ಎಂಬುವರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಇವರ ಪತಿ ಕೂಡಾ ಪಟ್ಟಣದ ಖಾಸಗಿ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿದ್ದರು.ಜಾನ್ ಪಾಪಲ್ಯಾಂವ್ ಫರ್ನಾಂಡಿಸ್ ಎಂಬುವರ ಮನೆಯಲ್ಲಿಯೇ ಕಳ್ಳತನ ನಡೆದಿದೆ.

ಇವರು ಪಟ್ಟಣದ ಖಾಸಗಿ ಬ್ಯಾಂಕ್ ನಲ್ಲಿ ಮ್ಯಾನೇ ಜರ್ ಆಗಿ ಕೆಲಸ ಮಾಡುತ್ತಿದ್ದು ಇವರ ಪತ್ನಿ ಕೂಡಾ ಹಳಿಯಾಳಕ್ಕೆ ಶಾಲೆಗೆ ಹೋಗಿದ್ದರು.ಪತಿ ಪತ್ನಿ ಇಬ್ಬರು ಕೆಲಸಕ್ಕೆ ಹೋಗಿದ್ದಾಗ ಹಾಡು ಹಗಲೇ ಈ ಒಂದು ಕಳ್ಳತನ ನಡೆದಿದ್ದು ಒಂದು ಮಂಗಳ ಸೂತ್ರ, ಚೈನ್,ಉಂಗುರು, ಬೆಳ್ಳಿಯ ಬ್ರೇಸ್ ಲೈಟ್ ಸೇರಿದಂತೆ ಹಲವು ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.



ಮನೆಯ ಹಿಂದಿನ ಬಾಗಿಲನ್ನು ಮುರಿದು ಈ ಒಂದು ಕಳ್ಳತನವನ್ನು ಮಾಡಿದ್ದು ಇನ್ನೂ ವಿಷಯ ತಿಳಿದ ಅಳ್ನಾವಪ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀ ಲನೆ ನಡೆಸಿ ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂಡಿದ್ದು ಪೊಲೀಸರು ತನಿಖೆಯನ್ನು ಮಾಡ್ತಾ ಇದ್ದಾರೆ.ಇನ್ನೂ ಪ್ರಮುಖವಾಗಿ ಹಾಡು ಹಗಲೇ ಈ ಒಂದು ಕೃತ್ಯ ನಡೆದಿದ್ದು ದುರುಂತದ ವಿಚಾರವೇ ಸರಿ.
