ಚಿಂತಾಮಣಿ –
ಖಾಸಗಿ ಶಾಲೆಗಳಿಗಿಂತ ಹೈಟೆಕ್ ಆಗಿದೆ ಈ ಸರ್ಕಾರಿ ಶಾಲೆ ಶಿಕ್ಷಕರ ಪರಿಶ್ರಮದಿಂದಾಗಿ ಸರ್ಕಾರಿ ಶಾಲೆ
ಹೇಗಿದೆ ನೋಡಿ ರಾಜ್ಯಕ್ಕೆ ಮಾದರಿಯಾದ ಸರ್ಕಾರಿ ಶಾಲೆ ಹೌದು ನಗರದ ಹೊರವಲಯದ ಶಿಡ್ಲಘಟ್ಟ ರಸ್ತೆಯಲ್ಲಿರುವ ಕೋನಪ್ಪಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಶಾಲೆಯಾಗಿದೆ.ಮಕ್ಕಳಿಗೆ ಆಕರ್ಷಣೀ ಯವಾಗಿ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಮಾದರಿಯಾಗಿದೆ.1 ರಿಂದ 7ನೇ ತಗತಿಯವರೆಗೆ 65 ಮಕ್ಕಳು ಕಲಿಯುತ್ತಿದ್ದಾರೆ.ನಾಲ್ವರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
3.5 ಎಕರೆ ವಿಶಾಲವಾದ ಪ್ರದೇಶದಲ್ಲಿ ಶಾಲೆ ಇದ್ದು ಸುತ್ತಲೂ ಆವರಣ ಗೋಡೆ ನಿರ್ಮಿಸಲಾಗಿದೆ ಶಾಲೆಯ ಆವರಣದಲ್ಲೇ ಗುಂಪು ಸಂಪನ್ಮೂಲ ಗುಚ್ಚ ಕೇಂದ್ರ, ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿವೆ.ನೇರಳೆ, ಹೊಂಗೆ, ಹತ್ತಿ, ಬಾಳೆ ಮತ್ತಿತರ ಮರಗಿಡಗಳು ಹಾಗೂ ವಿವಿಧ ಹೂ ಗಿಡಗಳನ್ನು ಬೆಳೆಸಲಾಗಿದೆ. ಉತ್ತಮ ತರಗತಿ ಕೊಠಡಿ, ಶೌಚಾಲಯ, ಅಕ್ಷರ ದಾಸೋಹದ ಅಡುಗೆ ಕೋಣೆ, ಕುಡಿಯುವ ನೀರು ಮತ್ತಿತರ ಎಲ್ಲ ಸೌಲಭ್ಯಗಳಿವೆ.
ಶಾಲೆಯು ನಗರದ ಹೊರವಲಯದಲ್ಲಿ ಇರುವುದರಿಂದ ಖಾಸಗಿ ಶಾಲೆಗಳ ಪೈಪೋಟಿ ಅಧಿಕವಾಗಿದೆ.ನಗರದ ಆಕರ್ಷಣೆ ಮತ್ತು ಖಾಸಗಿ ಶಾಲೆಗಳ ನಡುವೆ ಸರ್ಕಾರಿ ಶಾಲೆಯನ್ನು ಉಳಿಸಿಕೊಂಡಿರುವುದೇ ಹೆಗ್ಗಳಿಕೆಯಾ ಗಿದೆ ಮಕ್ಕಳಿಗೆ ದಾನಿಗಳ ನೆರವಿನಿಂದ ಐ.ಡಿ ಕಾರ್ಡ್ ಕೂಡಾ ಟೈ-ಬೆಲ್ಟ್, ಸಮವಸ್ತ್ರ ವಿತರಿಸಲಾಗಿದೆ.
ಪಾಠೋಪಕರಣ, ಬಿಸಿ ಊಟಕ್ಕೆ ಅಗತ್ಯವಾದ ಅಡುಗೆ ಕೋಣೆ ಇದೆ. ಶಾಲೆಯ ಆವರಣದಲ್ಲಿ ಹಾಗೂ ಸುತ್ತ. ಮುತ್ತಲು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.ಮಕ್ಕಳಿಗೆ ಪ್ರತಿನಿತ್ಯ ಪರಿಸರ ಮತ್ತು ನೀರಿನ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ನಿತ್ಯವೂ ಪ್ರಾರ್ಥನಾ ಸಮಯದಲ್ಲಿ ಪರಿಸರ ಮತ್ತು ನೀರಿನ ಮಹತ್ವದ ಅರಿವು ಮೂಡಿಸಲಾಗುತ್ತದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಮುನಿನಾರಾಯಣಸ್ವಾಮಿ.ಶಾಲೆಗೆ ಬಣ್ಣ ಬಳಿದು ಮಕ್ಕಳಿಗೆ ಆಕರ್ಷಣೀಯವಾಗುವಂತೆ ಮಾಡಲಾಗಿದೆ.
ದಾನಿಯೊಬ್ಬರು ತಮ್ಮ ಕೊಳವೆ ಬಾವಿಯಿಂದ ನೇರ ವಾಗಿ ಪೈಪ್‌ಲೈನ್ ಹಾಕಿಸಿ ನೀರಿನ ವ್ಯವಸ್ಥೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿಯಿಂದಲೂ ನೀರು ಪೂರೈಕೆ ಮಾಡಲಾಗುತ್ತಿದೆ. ಶಾಲಾ ಮಕ್ಕಳಿಗೆ ಮತ್ತು ಗಿಡಗಳಿಗೆ ನೀರಿನ ಸಮಸ್ಯೆ ಇಲ್ಲ. ಇರುವ ಆಟದ ಮೈದಾನದಲ್ಲಿ ಮಕ್ಕಳು ಆಟಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.
ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್‌ಗಾಗಿ 60 ಇಂಚಿನ ಡಿಜಿಟಲ್ ಬೋರ್ಡ್, ಕಂಪ್ಯೂಟರ್, ಪ್ರಿಂಟರ್ ಇದೆ. ಉತ್ತಮ ಕಲಿಕೆಗೆ ಅನುಕೂಲವಾಗಿದ್ದು ಕಲಿಕಾ ವಾತಾ ವರಣವಿದೆ. ಪ್ರತಿದಿನ ಪ್ರಾರ್ಥನಾ ಸಮಯದಲ್ಲಿ ಮಕ್ಕಳಿಂದ ಶುಭಾಷಿತ, ವಿಶೇಷ ವಾರ್ತೆ ಓದಿಸುವುದು, ಜನ್ಮ ದಿನ ಇರುವ ವಿದ್ಯಾರ್ಥಿಗಳಿಗೆ ಹುಟ್ಟು ಹಬ್ಬದ ಶುಭಾಶಯ ಕೋರಲಾಗುತ್ತದೆ.
ವರ್ಷದ ಎಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗ್ರಾಮದ ಮುಖಂಡರು ಭಾಗವಹಿಸಿ ಸಹಕಾರ ನೀಡುತ್ತಾರೆ. ಪ್ರತಿವರ್ಷ ಎಸ್‌ಡಿಎಂಸಿ ಮತ್ತು ಗ್ರಾಮಸ್ಥರ ಸಹಕಾರ ದಿಂದ ಫೆಬ್ರುವರಿ ಕೊನೆಯ ವಾರ ಅಥವಾ ಮಾರ್ಚ್ ಪ್ರಥಮ ವಾರದಲ್ಲಿ ಶಾಲಾ ವಾರ್ಷಿಕೋತ್ಸವ, ಶಾರದಾ ಪೂಜೆ ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಆಚರಿಸಲಾಗುತ್ತದೆ.
ಶಾಲೆಯಲ್ಲಿ ಶಿಕ್ಷಕರು ಪಾಠದ ಜೊತೆಗೆ ರಸಪ್ರಶ್ನೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಕ್ತಿಗೀತೆಗಳ ಗಾಯನ ಏರ್ಪಡಿಸುತ್ತಾರೆ. ಚಟುವಟಿಕೆ ಆಧಾರಿತ ಕಾರ್ಯಕ್ರಮಗಳು ಕ್ರಮಬದ್ಧವಾಗಿ ನಡೆಯುತ್ತವೆ. ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ, ಕ್ರೀಡಾಕೂಟ ದಲ್ಲಿ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.
ಶಾಲೆಯ ಆವರಣದಲ್ಲಿರುವ ಹಳೆಯ ಕಟ್ಟಡವನ್ನು ಕೆಡವಿ, ಅವಶೇಷಗಳನ್ನು ಹೊರಗಡೆ ಸಾಗಿಸಬೇಕು. ಸದ್ಯಕ್ಕೆ ಖಾಸಗಿಯವರು ನೀರು ಪೂರೈಕೆ ಮಾಡುತ್ತಿ ದ್ದಾರೆ. ಗ್ರಾಮ ಪಂಚಾಯಿತಿಯಿಂದ ಸಂಪರ್ಕವಿದ್ದರೂ ಸಮರ್ಪಕವಾಗಿ ನೀರು ಬರುತ್ತಿಲ್ಲ.ಗ್ರಾಮ ಪಂಚಾಯಿತಿ ಯಿಂದ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಶಿಕ್ಷಕರು.
ನಮ್ಮೂರ ಸರ್ಕಾರಿ ಶಾಲೆ ಖಾಸಗಿ ಶಾಲೆಯಂತೆ ಉತ್ತಮವಾಗಿ ನಡೆಯುತ್ತಿದೆ. ಮಕ್ಕಳಿಗೆ ಶಿಸ್ತುಬದ್ದವಾಗಿ ಪಾಠ ನಡವಳಿಕೆ ಕಲಿಸುವ ಮೂಲಕ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಮಕ್ಕಳು ಆಸಕ್ತಿಯಿಂದ ಶಾಲೆಗೆ ಬರುತ್ತಾರೆ. ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಪೋಷಕರ ಮತ್ತು ಗ್ರಾಮಸ್ಥರ ಸಹಕಾರ ಮತ್ತಷ್ಟು ಅಗತ್ಯವಿದೆ. ಮುನಿನಾರಾಯಣಸ್ವಾಮಿ ಮುಖ್ಯ ಶಿಕ್ಷಕ ಆಟಗಳಿಗೆ ಅನುಕೂಲ ಶಾಲೆಯ ಆವರಣ ಸಾಕಷ್ಟು ವಿಶಾಲವಾಗಿದ್ದು ಆಟಗಳಿಗೆ ಅನುಕೂಲವಾಗಿದೆ.
ಆವರಣದಲ್ಲಿ ವಿವಿಧ ಜಾತಿಯ ಗಿಡಮರ ಹಾಗೂ ಹೂ ಗಿಡಗಳನ್ನು ಬೆಳೆಸಿರುವುದರಿಂದ ಹಸಿರುಮಯವಾಗಿದೆ. ಖಾಸಗಿ ಶಾಲೆಗಳಲ್ಲಿರುವಂತೆ ಐಡಿ ಕಾರ್ಡ್ ಟೈ-ಬೆಲ್ಟ್ ನೀಡುತ್ತಾರೆ. ಪ್ರತಿನಿತ್ಯ ಶಾಲೆಗೆ ಹೋಗಲು ಉತ್ಸಾಹ ದಿಂದ ಕಾಯುತ್ತಿರುತ್ತೇವೆ. ಧನುಷ್ ವಿದ್ಯಾರ್ಥಿ ಶಾಲೆಗೆ ಬರಲು ಖುಷಿ ಶಾಲೆಯಲ್ಲಿ ಪಾಠ ಪ್ರವಚನ ಸ್ಮಾರ್ಟ್ ಬೋರ್ಡ್ ಮೂಲಕ ನಡೆಯುತ್ತವೆ. ಮಕ್ಕಳು ಖುಷಿ ಯಿಂದ ಕಲಿಯಲು ಅನುಕೂಲವಾಗಿದೆ.
ಸುದ್ದಿ ಸಂತೆ ನ್ಯೂಸ್ ಚಿಂತಾಮಣಿ…..