ಕೊಲ್ಕತ್ತಾ –
ತೈಲ ಬೆಲೆ ಏರಿಕೆ ವಿರುದ್ಧ ಎಲ್ಲರೂ ಬೀದಿಗಿಳಿದು ಹೋರಾಟ ಮಾಡತಾ ಇದ್ದರೆ ಇತ್ತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಭಿನ್ನವಾದ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.ಹೌದು ಪ್ರತಿಭಟನೆ ಮಾಡದೇ ಎಲೆಕ್ಟ್ರಿಕ್ ಸ್ಕೂಟರ್‌ನ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸಿ ಅವರು ಗಮನಸೆಳೆದಿದ್ದಾರೆ.

ಕೊಲ್ಕತ್ತಾ ಮೇಯರ್ ಫರೀದ್ ಹಕೀಮ್ ಅವರು ಚಲಾಯಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನ ಹಿಂಬದಿ ಕುಳಿತು, ಬೆಲೆ ಏರಿಕೆ ವಿರೋಧಿ ಫಲಕ ಹಿಡಿದು ಆಗಮಿಸಿದ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

.
ಸರಿ ಸುಮಾರು ಐದು ಕಿ.ಮೀ ದೂರ ಅವರು ಹೀಗೆ ಪ್ರಯಾಣಿಸಿದ್ದು, ರಸ್ತೆಯಲ್ಲಿ ಜನರು ಇವರನ್ನು ನೋಡಿ ಆಶ್ಚರ್ಯಗೊಂಡರು. ತೈಲ ಬೆಲೆ ಕೆಲವು ರಾಜ್ಯಗಳಲ್ಲಿ ನೂರರ ಗಡಿ ದಾಟಿದೆ. ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳವು ಈಗಾಗಲೇ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ವ್ಯಾಟ್ ನ್ನು ಈಗಾಗಲೇ ಒಂದು ರೂಪಾಯಿ ಇಳಿಕೆ ಮಾಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು