ಹುಬ್ಬಳ್ಳಿ-
ಹುಬ್ಬಳ್ಳಿಯ 42ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಮಹದೇವಪ್ಪ ನರಗುಂದ ಪರ ಗೆಲುವಿನ ಅಲೆ ಕಂಡು ಬರತ್ತಿದೆ.ಹೌದು ಈ ಹಿಂದೆ ಪಕ್ಷದಲ್ಲಿದ್ದು ಕೊಂಡು ಅಧಿಕಾರದಲ್ಲಿ ಇರದಿದ್ದರೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಮಾಡಿದ ಇವರಿಗೆ ವಾರ್ಡ್ ನಲ್ಲಿ ಮತದಾರರು ಉತ್ತಮವಾದ ಸ್ಪಂದನೆ ನೀಡಿದ್ದಾರೆ.
ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಕೂಡಾ ಕ್ಷೇತ್ರದ ಶಾಸಕರಾಗಿರುವ ಜಗದೀಶ್ ಶೆಟ್ಟರ್ ಅವರ ಮತ್ತು ಸಂಸದು ಕೇಂದ್ರದ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಅವರೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನವನ್ನು ತಗೆದುಕೊಂಡು ಬಂದು ಅಭಿವೃದ್ದಿಯನ್ನು ಮಾಡಿರುವ ಇವರು ಈಗ ವಾರ್ಡ್ ನ ಜನತೆಯ ಸೇವೆಗೆ ಮುಂದಾಗಿದ್ದಾರೆ.
ಹೀಗಾಗಿ ಸಧ್ಯ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಯನ್ನು ಮಾಡಿರುವ ಮಹಾದೇವಪ್ಪ ನರಗುಂದ ಅವರು ಅಖಾಡಕ್ಕೆ ಇಳಿದಾಗಿನಿಂದ ಸಂತಸ ಗೊಂಡಿರುವ ವಾರ್ಡ್ ನ ಜನರು ಮತದಾರರು ಈಗ ಇವರ ಧ್ವನಿಯಾಗಿ ನಿಂತುಕೊಂಡಿದ್ದಾರೆ.
ನಾಮಪತ್ರ ಸಲ್ಲಿಸಿ ಪ್ರಚಾರ ಕೈಗೊಂಡ ಇವರಿಗೆ ಆರಂಭದಿಂದಲೂ ಗೆಲುವಿನ ಮಾತುಗಳನ್ನು ಹೇಳು ತ್ತಿರುವ ಮತದಾರರು ಬದಲಾವಣೆ ಬಯಸಿದ್ದೇವೆ ಅದು ನಿಮ್ಮಿಂದಾಗಲಿ ಎನ್ನುತ್ತಿದ್ದು ಎಲ್ಲೇಡೆ ಇವರ ಪರವಾದ ಅಲೆ ಕಂಡು ಬರುತ್ತಿದೆ.ಹೀಗಾಗಿ ವಾರ್ಡ್ ನಲ್ಲಿ ಸಧ್ಯ ಬಿಜೆಪಿ ಪರ ಅಲೆ ಜೋರಾಗಿ ಕೇಳಿ ಬರುತ್ತಿದ್ದು ಹೊಸ ಕನಸು ಹೊಸ ಅಭಿವೃದ್ದಿಯ ಯೋಜನೆಗಳೊಂದಿಗೆ ಸ್ಪರ್ಧೆ ಮಾಡಿರುವ ಇವರಿಗೆ ವಾರ್ಡ್ ನಲ್ಲಿ ಮತದಾರರು ಜೈ ಜೈ ಎನ್ನುತ್ತಿದ್ದು ಈ ಬಾರಿ ವಾರ್ಡ್ ನಲ್ಲಿ ನಿಮ್ಮದೇ ಗೆಲುವು ನಿವೇ ನಮಗೆ ಬಾಸ್ ಎನ್ನುತ್ತಾ ಗೆಲುವಿನ ಮಾತುಗಳನ್ನು ಹೇಳಿ ಆಶೀರ್ವಾದವನ್ನು ಮಾಡುತ್ತಿದ್ದಾರೆ.
ಹೀಗಾಗಿ ವಾರ್ಡ್ ನಲ್ಲಿ ಮಹಾದೇವಪ್ಪ ನರಗುಂದ ಅವರು ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ.
ಬಿಡುವಿಲ್ಲದೇ ಅಬ್ಬರದ ಪ್ರಚಾರವನ್ನು ಮಾಡುತ್ತಿ ದ್ದಾರೆ.ಕೇಂದ್ರದಲ್ಲಿ ನಮ್ಮದೇ ಸರ್ಕಾರ ರಾಜ್ಯದಲ್ಲಿ ನಮ್ಮ ಸರ್ಕಾರ ಹೀಗಾಗಿ ಪಾಲಿಕೆಯಲ್ಲೂ ನಾವೇ ಅಧಿಕಾರಕ್ಕೆ ಬಂದರೆ ಅನುಕೂಲವಾಗುತ್ತದೆ ಎಂದು ಕೊಂಡಿರುವ ಇವರು ಮತದಾರರಲ್ಲಿ ಅಭಿವೃದ್ದಿಯ ಕೆಲಸ ಕಾರ್ಯಗಳೊಂದಿಗೆ ಬಿಡುವಿಲ್ಲದೇ ಮತ ಯಾಚನೆಯಲ್ಲಿ ತೊಡಗಿದ್ದಾರೆ.
ಇನ್ನೂ ವಾರ್ಡ್ ನಲ್ಲಿ ಹಲವೆಡೆ ಅಬ್ಬರದ ಪ್ರಚಾರ ವನ್ನು ಮಾಡುತ್ತಿದ್ದು ಭೋವಿ ವಡ್ಡರ ಸಮಾಜ, ಡೊ೦ಬರ್ ಸಮಾಜ ಹಾಗೂ ಹರಿಜನ್ ಸಮಾಜ ದವರು ಜೊತೆಗೂಡಿ ಒಗ್ಗಟ್ಟಿನ ಮಂತ್ರ ಜಪಿಸಿ. ಇಂದು ವಾರ್ಡ್ ನಂಬರ್ 42 ರ ಬಿಜೆಪಿ ಅಭ್ಯರ್ಥಿ ಯಾದ ಮಹದೇವಪ್ಪ ನರಗುಂದ ಅವರಿಗೆ ತಮ್ಮ ಬೆಂಬಲವನ್ನು ಸೂಚಿಸಿ ಪ್ರಚಂಡ ಬಹುಮತದಿಂದ ಆರಿಸಿ ತರುವ ಭರವಸೆಯನ್ನು ನೀಡಿದರು.
ಹಾಗೂ ಎಲ್ಲರೂ ಜೊತೆಗೂಡಿ ಅಭ್ಯರ್ಥಿಯ ಪರವಾಗಿ ಬಿರುಸಿನ ಅತಿ ವಿಜೃಂಭಣೆಯಿಂದ ಮನೆಮನೆಗೆ ತೆರಳಿ ಪ್ರಚಾರ ಮಾಡಿದರು. ಪ್ರಚಾರ ದಲ್ಲಿ ಭೋವಿ ವಡ್ಡರ ಸಮಾಜದ ಹಿರಿಯರಾದ ಆನಂದ್ ಬೇವಿನಕಟ್ಟಿ,ಲಕ್ಷ್ಮಣ್ ಗೋಡಿ.ನಾಗೇಶ್ ಇಳಕಲ್.ಪರಶುರಾಮ ಮ್ಯಾಗೇರಿ,ನೀಲಪ್ಪ ಉಣಕಲ್ ಸುನಿಲ್ ಗೊಡಚಿ. ಬಸವರಾಜ್ ಸುಳ್ಳದ ಡೊ೦ಬರ ಸಮಾಜದ ಹಿರಿಯರಾದ ,ಮಾದೇವಪ್ಪ ಹೊಸಮನಿ. ಪ್ರಕಾಶ್ ಕಬೇರ್.ಮೋಹನ್ ಅಡರ ಕಟ್ಟಿ .ಹಾಗೂ ಹರಿಜನ್ ಸಮಾಜದ ವರಾದ ಈರಪ್ಪ ಕುಕುನೂರ್ ,ಕಲ್ಲಪ್ಪ ಹೊಸಮನಿ ,ಅರುಣ್ ಹೊಸಮನಿ,ಹಾಗೂ ನೂರಾರು ಸಂಖ್ಯೆಯ ಯುವ ಕರು ಭಾಗವಹಿಸಿ ಮತಯಾಚನೆ ಮಾಡಿದರು.