ಬೆಂಗಳೂರು –
ಸಾಮಾನ್ಯವಾಗಿ ಪ್ರತಿ ವರ್ಷ ರಾಜ್ಯದಲ್ಲಿ ನಾಡಹಬ್ಬ ದಸರಾಗೆ ಶಾಲಾ ಕಾಲೇಜುಗಳಿಗೆ ದಸರಾ ರಜೆ ಘೋಷಣೆ ಮಾಡಲಾಗುತ್ತಿದೆ ಆದರೆ ಈ ಬಾರಿ ಶಾಲಾ-ಕಾಲೇಜುಗಳಿಗೆ ದಸರಾ ಸಮಯದಲ್ಲಿ ರಜೆ ಇಲ್ಲದಿರುವುದು ವಿದ್ಯಾರ್ಥಿ ಗಳು ಶಿಕ್ಷಕರು, ಪೋಷಕರ ಬೇಸರಕ್ಕೆ ಕಾರಣವಾಗಿದೆ ಸೆ.26 ರಿಂದ ಅಕ್ಟೋಬರ್ 5ರವರೆಗೆ ನಾಡಹಬ್ಬ ದಸರಾ, ನವರಾತ್ರಿ ಉತ್ಸವದ ಸಂಭ್ರಮ ಇದೆ ಆದರೆ ಶಾಲಾ ಕಾಲೇಜುಗಳಿಗೆ ಮಾತ್ರ ಈ ಬಾರಿ ಮಂಗಳೂರನ್ನು ಬಿಟ್ಟರೆ ರಜೆಯನ್ನು ರಾಜ್ಯಾಧ್ಯಂತ ಮಾರ್ಪಾಡು ಮಾಡಿ ಈಗಾ ಗಲೇ ಶಿಕ್ಷಣ ಸಚಿವರು ದಸರಾ ಬದಲಾಗಿ ದಸರಾ ಹಬ್ಬ ಮುಗಿದ ಬಳಿಕ ನೀಡಲಾಗಿದೆ ಎಂದು ಸೂಚನೆ ನೀಡಿ ದ್ದಾರೆ.
ಈ ಒಂದು ಶಿಕ್ಷಣ ಇಲಾಖೆಯ ಕ್ರಮಕ್ಕೆ ಪೋಷಕರು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಹೊರಡಿಸಿರುವ ಪ್ರಸಕ್ತ ಸಾಲಿನ ಶೈಕ್ಷಣಿಕ ಕ್ಯಾಲೇಂಡರ್ ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಅಕ್ಟೋಬರ್ 3 ರಿಂದ 16ವರೆಗೆ ಹಾಗೂ ಪದವಿ ಪೂರ್ವ ಇಲಾಖೆಯು ಅಕ್ಟೋಬರ್ 1ರಿಂದ 13 ರವರೆಗೆ ದಸರಾ ರಜೆ ನಿಗದಿ ಪಡಿಸಿದೆ.ಅಂದರೆ ನವರಾತ್ರಿ ಯ ಕೊನೆ ಎರಡು ದಿನ ಮಕ್ಕಳು ಶಾಲೆಯಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ.ಹೀಗಾಗಿ ಶಿಕ್ಷಣ ಇಲಾಖೆಗೆ ವರ್ಷದ ರಜೆ ಹಬ್ಬಗಳ ಆಚರಣೆ ಬಗ್ಗೆ ಮೊದಲೇ ಗೊತ್ತಿ ದ್ದರೂ ಇಂತಹ ಎಡವಟ್ಟು ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.ಅಲ್ಲದೇ ಈಗಲಾದರೂ ಹಬ್ಬಕ್ಕೆ ಅನುಗು ಣವಾಗಿ ರಜೆ ಸಮಯ ನಿರ್ದಿಷ್ಟ ಪಡಿಸುವಂತೆ ಪೋಷಕರ ಒತ್ತಾಯಿಸಿದ್ದಾರೆ.
ಈ ಹಿಂದೆ ದಸರಾ ರಜೆ ಶಾಲೆಗಳಿಗೆ 28 ದಿನಗಳ ಕಾಲ ಇದ್ದುದನ್ನು ಬಳಿಕ 15 ದಿನಗಳಿಗೆ ಕಡಿತಗೊಳಿಸಲಾಯಿತು. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ 13 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಈ ಬಾರಿ ದಸರಾ ರಜೆ ಬಗ್ಗೆ ಇನ್ನೂ ಸ್ಪಷ್ಟತೆ ಸಿಗುತ್ತಿಲ್ಲ. ಸದ್ಯದ ಶಿಕ್ಷಣ ಇಲಾಖೆ ಕ್ಯಾಲೆಂಡರ್ ಪ್ರಕಾರ ದಸರಾ ಮುಗಿಯುವ ವೇಳೆಗೆ ರಜೆ ಆರಂಭವಾಗುತ್ತಿರುವುದು ಮಕ್ಕಳು, ಪೋಷಕರು, ಶಿಕ್ಷಕರ ಕೆಂಗಣ್ಣಿಗೆ ಕಾರಣವಾಗಿದೆ.ಮಂಗಳೂರಿಗೆ ಮಾತ್ರ ರಜೆ ಯನ್ನು ಪ್ರತ್ಯೇಕವಾಗಿ ಹೊರಡಿಸಿದ್ದು ಹೀಗಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.