ಬೆಂಗಳೂರು –
ವಿಮಾನದ ಮೂಲಕ ನಗರಕ್ಕೆ ಬಂದು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ 38 ಲಕ್ಷ ರೂ.ಬೆಲೆಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿ ದ್ದಾರೆ.ಹೌದು ಪಶ್ಚಿಮ ಬಂಗಾಳ ಮೂಲದ ಹರಿದಾಸ್ ಬರಾಯಿ(37) ಮತ್ತು ಪಾರ್ಥ ಹಲ್ದಾರ್(32) ಬಂಧಿತರಾಗಿ ದ್ದಾರೆ.ಇವರಿಬ್ಬರು ಪಶ್ಚಿಮ ಬಂಗಾಳ ರಾಜ್ಯದಿಂದ ವಿಮಾನದ ಮೂಲಕ ನಗರಕ್ಕೆ ಬಂದು ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಬೀಗ ಮುರಿದು ಕಳ್ಳತನ ಮಾಡಿ ಕೊಂಡು ಪುನಃ ಪಶ್ಚಿಮ ಬಂಗಾಳಕ್ಕೆ ವಿಮಾನದಲ್ಲಿ ಹೋಗಿ ತಲೆಮರೆಸಿಕೊಳ್ಳುತ್ತಿದ್ದರು.
ಆರೋಪಿಗಳನ್ನು ಪಶ್ಚಿಮ ಬಂಗಾಳ ರಾಜ್ಯದಲ್ಲಿಯೇ ಪತ್ತೆಹಚ್ಚಿ ಬಂಧಿಸಿ ಪೊಲೀಸ್ ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆ ತಂದು ವಿಚಾರಣೆಗೊಳಪಡಿಸಿ ಸುಮಾರು 745 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿ ಹರಿದಾಸ್ ಬರಾಯಿ ಈ ಹಿಂದೆ ಸಿಕಂದರಾಬಾದ್ ಮತ್ತು ದೆಹಲಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲಿಗೆ ಹೋಗಿ ಬಂದಿರುವುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.ಈ ಪ್ರಕರಣ ಭೇದಿಸುವಲ್ಲಿ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಭೀಮಾಶಂಕರ್ ಎಸ್.ಗುಳೇದ್ ಮಾರ್ಗದರ್ಶದಲ್ಲಿ ಬಾಣಸವಾಡಿ ಉಪವಿಭಾಗದ ಸಹಾ ಯಕ ಪೊಲೀಸ್ ಆಯುಕ್ತ ಎನ್.ಬಿ.ಸಕ್ರಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಸತೀಶ್ ಅವರನ್ನೊಳಗೊಂಡ ತಂಡ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಆಭರಣ ವಶಪ ಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಹಿರಿಯ ಅಧಿಕಾರಿ ಗಳು ಪ್ರಶಂಸಿಸಿದ್ದಾರೆ.ಸಾರ್ವಜನಿಕರಲ್ಲಿ ಮನವಿ ಸಾರ್ವ ಜನಿಕರು ಬೇರೆ ಸ್ಥಳಕ್ಕೆ ತೆರಳುವಾಗ ಅಥವಾ ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗುವಾಗ ಎಷ್ಟು ದಿನಗಳ ಕಾಲ ಹೋಗುತ್ತೀರೆಂದು ಪೇಪರ್ ಹಾಲು ಹಾಕುವವರಿಗೆ ಮುಂಚಿತವಾಗಿಯೇ ತಿಳಿಸಲು ಪೊಲೀಸರು ಮನವಿ ಮಾಡಿದ್ದಾರೆ.ತಾವು ವಾಪಸ್ ಬರುವವರೆಗೂ ಹಾಕಬಾರದೆಂದು ಮಾಹಿತಿ ನೀಡಬೇಕು ಹಾಗೂ ಬೀಗ ವನ್ನು ಹೊರಗೆ ಕಾಣದಂತೆ ಹಾಕಬೇಕು,ಸಾಧ್ಯವಾದರೆ ಸ್ಥಳೀಯ ಠಾಣೆ ಪೊಲೀಸರಿಗೆ ತಿಳಿಸಿದ್ದಲ್ಲಿ ತಮ್ಮ ಮನೆ ಕಡೆಗಳಲ್ಲಿ ಹೆಚ್ಚಿನ ರೀತಿ ಗಸ್ತು ಮಾಡಿ ಅಪರಾಧವನ್ನು ತಡೆಯಲು ಸಹಕಾರಿಯಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.