ಹುಬ್ಬಳ್ಳಿ –
EXCLUSIVE
ಇದೊಂದು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ ವ್ಯಕ್ತಿಯೊಬ್ಬರಿಗೆ ಸಮಾಜದಿಂದ ಬಹಿಷ್ಕಾರ ಹಾಕಿದ ಕಥೆ ಇದು.ಹೌದು ಇಂಥಹ ದೊಂದು ಸಮಾಜ ಬಹಿಷ್ಕಾರವೊಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಂಡು ಬಂದಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದ ಮುನ್ನಾ ಐನಾಪುರಿಗೆ ಈಗ ಸಮಾಜದಿಂದ ಬಹಿಷ್ಕಾರವನ್ನು ಹಾಕಲಾಗಿದೆ
ಕಳೆದ ಮೂರು ನಾಲ್ಕು ದಿನಗಳ ಹಿಂದೆ ಸಚಿವ ಜಗದೀಶ ಶೆಟ್ಟರ ನೇತೃತ್ವದಲ್ಲಿ ಬಿಜೆಪಿಗೆ ಸೇರಿದ್ದರು ಮುನ್ನಾ ಐನಾಪುರಿ.ಬಿಜೆಪಿ ಸೇರಿದ್ದಕ್ಕೆ ಈಗ ಮುನ್ನಾ ವಿರುದ್ಧ ಸಮುದಾಯದಲ್ಲಿ ಆಕ್ರೋಶ ವ್ಯಕ್ಯವಾಗಿದೆ. ಮುತವಲ್ಲಿ ಆಸಿಫ್ ಪಾಚಾಪುರ ಅವರಿಂದ ಬಹಿಷ್ಕರಿಸಿ ಆದೇಶವನ್ನು ಹೊರಡಿಸಲಾಗಿದೆ.
ಜಾಮಿಯಾ ಜುಮ್ಮಾ ಮಕಾನ್ ಮಸ್ಜಿದ್ ಜಮಾತ್ ನಿಂದ ಇವರಿಗೆ ಈಗ ಬಹಿಷ್ಕಾರವನ್ನು ಹಾಕಲಾಗಿದೆ. ರಾತ್ರಿಯಿಂದ್ಲೇ ಜಮಾತ್ ನಿಂದ ಬಹುಷ್ಕರಿಸಿ ಆದೇಶ ಹೊರಡಿಸಲಾಗಿದೆ ಅಲ್ಲದೇ ಮುನ್ನಾ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಸಮುದಾಯದವರು
ಮುನ್ನಾ ಐನಾಪುರಿ ಮುಲ್ಲಾ ಓಣಿಯ ಡಾಕಪ್ಪ ಸರ್ಕಲ್ ನಿವಾಸಿಯಾಗಿದ್ದಾರೆ.ಆತನಿಗೆ ಸೇರಿದ ಮನೆ, ಪಾತ್ರೆ ಅಂಗಡಿಯನ್ನು ಮುಲ್ಲಾ ಓಣಿಯಿಂದ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದ್ದು ಇದೆಂಥಾ ಸಾಮಾಜಿಕ ಬದ್ದತೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಇಷ್ಟೊಂದು ಬೆಳವಣಿಗೆ ನಡೆದರೂ ಬಿಜೆಪಿ ನಾಯಕರು ಮಾತ್ರ ತಮ್ಮ ಪಾಡಿಗೆ ತಾವಿದ್ದು ಯಾರು ಮುನ್ನಾ ಪರ ಮಾತನಾಡುತ್ತಿಲ್ಲ