ಧಾರವಾಡ
ಧಾರವಾಡದಲ್ಲಿ ಜೂಜಾಟದ ಮೇಲೆ ಪೊಲೀಸರ ದಾಳಿ ಮುಂದುವರೆದಿದೆ. ಮೊನ್ನೇಯಷ್ಟೇ ಉಪನಗರ ಪೊಲೀಸರು ಐದು ಕಡೆಗಳಲ್ಲಿ ಆಡುತ್ತಿದ್ದ ಜೂಜಾಟದ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಇಂದು ಕೂಡಾ ದಾಳಿ ಮಾಡಿದ್ದಾರೆ. ಉಪನಗರ ಪೊಲೀಸರು. ಧಾರವಾಡದಲ್ಲಿ ಉಪನಗರ ಪೊಲೀಸರು ದಾಳಿ ಮಾಡಿ ಎರಡು ಕಡೆಗಳಲ್ಲಿ ಎಲೆ ತಟ್ಟುತ್ತಿದ್ದವರನ್ನು ಬಂಧಿಸಿದ್ದಾರೆ.
ಧಾರವಾಡದ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕೈದು ಕಡೆಗಳಲ್ಲಿ ಇಸ್ಪೇಟ್ ಎಲೆಗಳನ್ನು ತಟ್ಟುತ್ತಿದ್ದ ಅಡ್ಡೆಗಳ ಮೇಲೆ ದಾಳಿ ಮಾಡಿದ ಪೊಲೀಸರು 23 ಸಾವಿರ ನಗದು ಹಣದೊಂದಿಗೆ 11 ಜನರನ್ನು ಬಂಧಿಸಿದ್ದಾರೆ. ಪೊಲೀಸ್ ಆಯುಕ್ತರು ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಹಾಗೇ ಧಾರವಾಡದ ಶಹರ ನಗರದ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ಜಿ ಅನುಸಾ ಮಾರ್ಗದರ್ಶನದಲ್ಲಿ ಉಪನಗರ ಠಾಣೆ ಇನಸ್ಪೇಕ್ಟರ್ ಪ್ರಮೋದ ಸಿ ಯಲಿಗಾರ ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ ಕಾರ್ಯಾಚರಣೆ ಮಾಡಿ ಲಾಭಕ್ಕಾಗಿ ಇಸ್ಪೇಟ್ ಎಲೆಗಳನ್ನು ತಟ್ಟುತ್ತಾ ಅಡ್ಡೆಯಲ್ಲಿ ಕುಳಿತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.
ನಗರದ ಮೆಹಬೂಬನಗರ ಹಾಗೇ ಆಂಜನೇಯ ನಗರಗಳಲ್ಲಿ ಗುಂಪು ಗುಂಪಾಗಿ ಕೆಲವರು ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಅಂದರ್ ಬಾಹರ್ ಆಡುತ್ತಿದ್ದರು. ಖಚಿತವಾದ ಮಾಹಿತಿ ಪಡೆದುಕೊಂಡ ಇನಸ್ಪೇಕ್ಟರ್ ಪ್ರಮೋದ ಯಲಿಗಾರ ಮತ್ತು ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ ತಮ್ಮ ಸಿಬ್ಬಂದ್ದಿಗಳೊಂದಿಗೆ ದಾಳಿ ಮಾಡಿ ಅಂದರ್ ಬಾಹರ್ ಆಡುತ್ತಿದ್ದವರನ್ನು ಅಂದರ್ ಮಾಡಿದ್ದಾರೆ. ಒಟ್ಟು ಎರಡು ಪ್ರಕರಗಳನ್ನು ಭೇಧಿಸಿರುವ ಉಪನಗರ ಪೊಲೀಸರು 23 ಸಾವಿರ ಹಣದೊಂದಿಗೆ 11 ಜನರನ್ನು ಬಂಧಿಸಿ ವಯಕ್ತಿಕ ಲಾಭಕ್ಕಾಗಿ ಆಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.
ಇನ್ನೂ ಮೊನ್ನೇ ಮೊದಲನೇಯ ದಿನ ಮೊದಲನೇಯ ದಾಳಿ ಮಾಡಿರುವ ಉಪನಗರ ಪೊಲೀಸರು ರಾತ್ರಿ ಒಂದೇ ದಿನ 5 ಕೇಸ್ ಮಾಡಿ 28 ಜನರನ್ನು ಬಂಧಿಸಿ 95 ಸಾವಿರಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ.ನೆಹರುನಗರ, ಎತ್ತಿನಗುಡ್ಡ, ಗುಲಗಂಜಿಕೊಪ್ಪ, ಮಾಳಾಪೂರ , ಮರಾಠ ಕಾಲೋನಿ ಹೀಗೆ ಐದು ಕಡೆಗಳಲ್ಲಿ ಅಂದರ್ ಬಾಹರ್ ಆಡುತ್ತಿದ್ದರು.ಇದರ ನಡುವೆ ನಿನ್ನೇ ಕೂಡಾ ಧಾರವಾಡದ ಉಪನಗರ ಪೊಲೀಸರು ದಾಳಿಯನ್ನು ಮುಂದುವರಿಸಿದ್ದು ಮತ್ತೆರೆಡು ಪ್ರಕರಣಗನ್ನು ದಾಖಲು ಮಾಡಿಕೊಂಡು ಎಲೆ ತಟ್ಟುತ್ತಿರುವವರಿಗೆ ಬಿಸಿ ತಟ್ಟಿಸಿದ್ದಾರೆ. ಉಪನಗರ ಕಾರ್ಯಾಚರಣೆಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಶಹಬ್ಬಾಸ್ ಗಿರಿ ನೀಡಿದ್ದಾರೆ. ಇನ್ನೂ ಈ ಅಂದರ್ ಬಾಹರ್ ಕಾರ್ಯಾಚರಣೆ ಉಪನಗರ ಪೊಲೀಸ್ ಠಾಣೆಯ ಇನಸ್ಪೇಕ್ಟರ್ ಪ್ರಮೋದ ಯಲಿಗಾರ ಇನಸ್ಪೇಕ್ಟರ್ ಶ್ರೀಮಂತ ಹುಣಸಿಕಟ್ಟಿ.ಠಾಣೆಯ ಸಿಬ್ಬಂದ್ದಿಗಳಾದ ಉಮೇಶ ಬಂಗಾರಿ. ಶಿವು ದೊಡ್ಡಮನಿ, ಪ್ರದೀಪ ಕುಂದಗೋಳ,ಶಶಿ ನೀಲಮ್ಮನವರ, ಚಂದ್ರು ನಡುವಿನಮನಿ, ಹುಲಗೆಪ್ಪ ವಡ್ಡರ. ಆನಂದ ಬಡಿಗೇರ ಶ್ರೀಕಾಂತ ತಲ್ಲೂರ, ಎನ್ ಎಚ್ ಹಂಚಿನಾಳ . ಡಿ ಎಮ್ ಮಿಸ್ಸಿಗೇರಿ ,ಎಚ್ ಎಸ್ ಗಾಣಿಗೇರ ,ಬಸವರಾಜ ಮಾಗುಂಡನ್ನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇನ್ನೂ ಉಪನಗರ ಪೊಲೀಸರ ಕಾರ್ಯಕ್ಕೇ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.