ಧಾರವಾಡ –
ಮೂರು ಜಾನುವಾರಗಳನ್ನು ಕಳ್ಳತನ ಮಾಡಿದ ಘಟನೆ ಧಾರವಾಡದ ಗರಗ ಗ್ರಾಮದಲ್ಲಿ ನಡೆದಿದೆ. ಗರಗ ಗ್ರಾಮದ ಮಹಾವೀರ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ. ನಿನ್ನೆ ರಾತ್ರಿ ಸಂಗಪ್ಪ ಉಳವಪ್ಪ ಉಳವನ್ನವರ ಎಂಬುವರ ಮನೆಯ ಬೀಗವನ್ನು ಮುರಿದ ಖದೀಮರು ಬೀಗವನ್ನು ಮುರಿದು ದನದ ಕೊಟ್ಟಿಗೆಯಲ್ಲಿ ಪಾರ್ಟಿ ಮಾಡಿದ್ದಾರೆ.

ನಂತರ ನಾಲ್ಕು ಜಾನುವಾರಗಳಿಗೆ ಮೊದಲು ಇಂಜಕ್ಷಣ್ ಮಾಡಿದ್ದಾರೆ.ನಂತರ ಅದರಲ್ಲಿ ಮೂರು ಜಾನುವಾರುಗಳಾದ ಎರಡು ಎಮ್ಮೆ ಹಾಗೇ ಒಂದು ಕಿಲಾರಿ ಹೋರಿ ಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.ಅದರಲ್ಲಿ ಒಂದು ಹಾಯುತ್ತದೆ ಎಂದುಕೊಂಡು ಅದನ್ನು ಬಿಟ್ಟು ಕಳ್ಳರು ಎಸ್ಕೇಫ್ ಆಗಿದ್ದಾರೆ.

ಇನ್ನೂ ಬೆಳಿಗ್ಗೆ ಎಂದಿನಂತೆ ಬಂದು ನೋಡಿದಾಗ ಈ ಒಂದು ಘಟನೆ ಬೆಳಕಿಗೆ ಬಂದಿದ್ದು ಎರಡು ಲಕ್ಷ ರೂಪಾಯಿ ಮೌಲ್ಯದ ಜಾನುವಾರು ಗಳು ಕಳ್ಳತನವಾಗಿದ್ದು ಸಧ್ಯ ಈ ಕುರಿತಂತೆ ಗರಗ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ನಡೆಸಿ ದೂರನ್ನು ದಾಖಲು ಮಾಡಿಕೊಂಡಿದ್ದು ತನಿಖೆಯನ್ನು ಮಾಡತಾ ಇದ್ದಾರೆ.