ಹುಬ್ಬಳ್ಳಿ ಧಾರವಾಡ –
ಮೊನ್ನೆ ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರ ಹೆಸರು ಹೇಳಿ ಅವರಿ ವರ ಬಳಿ ಹಣ ವಸೂಲಿ ಮಾಡಿದ ಮಹಿಳೆಯೊಬ್ಬಳ ಪ್ರಕರಣದ ಬೆನ್ನಲ್ಲೇ ಈಗ ಮತ್ತೊಬ್ಬ ಮಹಿಳೆಯ ಚೀಟಿಂಗ್ ಬಯಲಾಗಿದೆ. ಹೌದು ಹುಬ್ಬಳ್ಳಿಯ ಫಾತಿಮಾ ಶೇಖ್ ಎಂಬುವರ ಮೇಲೆ ಮೋಸಕ್ಕೊಳ ಗಾದ ಯುವಕರು ಈ ಒಂದು ಆರೋಪವನ್ನು ಮಾಡಿದ್ದಾರೆ.

ಧಾರವಾಡದ ಕೆಲ ಯುವಕರಿಗೆ ಫಾತೀಮಾ ಶೇಖ್ ಅವರು ಹೆಸ್ಕಾಂ ನಲ್ಲಿ ಕೆಲಸ ಕೊಡಿಸುವ ಮಾತು ಹೇಳಿ ಈ ಕುರಿತು ಕೆಲವೊಂದಿಷ್ಟು ದಾಖಲೆಗಳನ್ನು ನೀಡಿ ಅವರಿಂದ ತಗೆದುಕೊಂಡು ಉದ್ಯೋಗದ ಆಸೆ ನೀಡಿ ಎರಡು ಮೂರು ಹಂತಗಳಲ್ಲಿ 50 ಸಾವಿರ ರೂಪಾಯಿ ಗಳನ್ನು ತೆಗೆದುಕೊಂಡು ಒಂದು ವರುಷವಾದರೂ ಈವರೆಗೆ ಉದ್ಯೋಗವು ಇಲ್ಲ ಇತ್ತ ಹಣವೂ ಇಲ್ಲದಂತಹ ಪರಿಸ್ಥಿತಿಯಲ್ಲಿ ಯುವಕರ ಬದುಕಾಗಿದೆ.

ಧಾರವಾಡದ ನಾಲ್ಕೈದು ಯುವಕರ ಬಳಿ ಹಾಗೇ ನವನಗರ,ಹುಬ್ಬಳ್ಳಿ ಹೀಗೆ ಹಲವು ಯುವಕರ ಬಳಿ ಹಣವನ್ನು ತಗೆದುಕೊಂಡಿದ್ದಾರಂತೆ.ಇದನ್ನು ಮೊಸಕ್ಕೊಳಗಾದ ಕೈಫ್,ಮುಜೊಂಬಿ ಸೇರಿದಂತೆ ಹಲವರು ಆರೋಪವನ್ನು ಮಾಡಿದ್ದಾರೆ.


ಹಣವನ್ನು ಕೊಟ್ಟ ಒಂದು ವರುಷ ಆದರೂ ಈವರೆಗೆ ಹಣವೂ ಇಲ್ಲ ಕೆಲಸವೂ ಇಲ್ಲ ಇದರಿಂದ ಬೇಸತ್ತ ನೊಂದ ಯುವಕರು ಈಗ ಮೊಸ ಮಾಡಿದ ಮಹಿಳೆಯ ವಿರುದ್ದ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಾರೆ
ಫಾತಿಮಾ ಶೇಖ್ ಅವರು ಯುವಕರಿಂದ ಹಣ ತಗೆದುಕೊಂಡ ಕುರಿತು ಕೆಲವೊಂದಿಷ್ಟು ದಾಖಲೆ ಗಳನ್ನು ಇಟ್ಟುಕೊಂಡಿದ್ದು ಇನ್ನೂ ಈ ಕುರಿತು ಪೊನ್ ಮಾಡಿದರು ಸ್ಪಂದಿಸುತ್ತಿಲ್ಲವಂತೆ. ಏನೇ ಆಗಲಿ ಉದ್ಯೋಗದ ಆಸೆ ಹಚ್ಚಿ ಯುವಕರಿಗೆ ಹೀಗೆ ಮಾಡಿ ಚೀಟಿಂಗ್ ಸರೀನಾ.ಏನೇನೂ ಆಸೆ ಹಚ್ಚಿ ಹೀಗೆ ಮಾಡಿದ್ದು ಸಾಲ ಶೂಲ ಮಾಡಿದ ಯುವಕರ ಕಷ್ಟ ಅನುಭವಿಸುತ್ತಿರುವವರಿಗೆ ಗೊತ್ತು.