ಹುಬ್ಬಳ್ಳಿ –
ಪತ್ನಿ ಹಾಗೂ ಇತರ ಮೂವರ ಕಿರುಕುಳದಿಂದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಗದಗ ಜಿಲ್ಲೆ ಬಿಂಕದಕಟ್ಟಿ ಮೂಲದ, ಹಾಲಿ ಬ್ಯಾಹಟ್ಟಿಯಲ್ಲಿ ವಾಸವಾಗಿದ್ದ ಚಾಲಕ ಮಹ್ಮದರಫೀಕ್ ಅಲ್ಲಾಸಾಬ್ ನದಾಫ (33) ಆತ್ಮಹತ್ಯೆ ಮಾಡಿಕೊಂಡವರಾಗಿದ್ದು ಪತ್ನಿ ಆಸ್ಮಾ ನದಾಫ, ಸಾಹಬ್ಬಿ ನದಾಫ, ಪಕ್ಕದ ಮನೆಯ ಮುದುಕಪ್ಪ ಹಾಗೂ ಮಾಂತ್ಯಾ ಎಂಬುವರ ಕಿರುಕುಳ ದಿಂದ ರಫೀಕ್ ಮನನೊಂದಿದ್ದ.ಇದೇ ವಿಚಾರವಾಗಿ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಿ ರಫೀಕ್ ತಾಯಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.