ಧಾರವಾಡ –
ಅಕಾಲಿಕ ಮಳೆಯಿಂದಾಗಿ ಧಾರವಾಡದಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದೆ.ಹುಬ್ಬಳ್ಳಿ ಧಾರವಾಡ ಸಂಪರ್ಕದ ಮುಖ್ಯ ರಸ್ತೆ ಸಂಪೂರ್ಣ ಬಂದ್ ಆಗಿದೆ.

ಧಾರವಾಡದ ಟೋಲ್ ನಾಕಾ ಸಂಪೂರ್ಣವಾಗಿ ಬಂದ್ ಆಗಿದೆ. ಕೋರ್ಟ್ ವೃತ್ತದಿಂದ ಗಾಂಧಿನಗರ ದವರೆಗೆ ಸಂಪೂರ್ಣ ಜಾಮ್ ಆಗಿದೆ.

ಸಾಲು ಸಾಲಾಗಿ ವಾಹನಗಳು ನಿಂತುಕೊಂಡಿವೆ.BRTS ರಸ್ತೆಯ ಕಾಮಗಾರಿ ಎಡವಟ್ಟಿನಿಂದಾಗಿ ರಸ್ತೆಯಲ್ಲಿ ದೊಡ್ಡದಾದ ಪ್ರಮಾಣದಲ್ಲಿ ನೀರು ನಿಂತುಕೊಂಡಿದೆ.ಹೀಗಾಗಿ ಟ್ರಾಫಿಕ್ ಜಾಮ್ ಆಗಿದೆ.

ಮಳೆಯಾದರೆ ಸಾಕು ಟೋಲ್ ನಾಕಾ ಬಳಿ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತುಕೊಂಡು ಸಂಚಾರಕ್ಕೆ ದೊಡ್ಡ ಪ್ರಮಾಣದಲ್ಲಿ ತೊಂದರೆಯಾಗುತ್ತದೆ ಎನ್ನೊದಕ್ಕೆ ಈ ಚಿತ್ರಣವೇ ಸಾಕ್ಷಿ.

ಸ್ವಲ್ಪ ಮಟ್ಟಿಗೆ ಮಳೆಯಾದರೆ ಮೊದಲು ಸಮಸ್ಯೆಯಾಗೊದು ಟೋಲ್ ನಾಕಾ ದಲ್ಲಿ .BRTS ರಸ್ತೆಯ ಕಾಮಗಾರಿ ಅವಾಂತರದಿಂದ ಈ ಒಂದು ಸಮಸ್ಯೆಯಾಗುತ್ತಿದೆ

ಮೊದಲು ಕಾಮಗಾರಿ ಮಾಡಿದ ನಂತರ ಈ ಒಂದು ಸಮಸ್ಯೆಯಿಂದ ಎಚ್ಚೆತ್ತುಕೊಂಡು ಮತ್ತೊಂದು ಬಾರಿ ಮಾಡಿದರು ಆದರೂ ಸಮಸ್ಯೆ ಮಾತ್ರ ಸಮಸ್ಯೆಯಾಗಿದೆ.
ಇನ್ನೂ ಇವತ್ತು ಸಂಜೆಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಮತ್ತೊಮ್ಮೆ ಧಾರವಾಡದ ಟೋಲ್ ನಾಕಾ ಸಂಪೂರ್ಣವಾಗಿ ಬಂದ್ ಆಗಿದೆ.ಒಂದು ಕಡೆ ಬಿಟ್ಟು ಬಿಡಲಾರದ ಮಳೆ ಮತ್ತೊಂದೆಡೆ ರಸ್ತೆ ಬಂದ್ ಹೀಗಾಗಿ ಎಲ್ಲೆಂದರಲ್ಲಿ ಸಂದಿ ಗೊಂದಿಗಳ ರಸ್ತೆಯನ್ನು ಹುಡುಕಾಡಿ ಸಾರ್ವಜನಿಕರು ಮನೆ ಸೇರಿಕೊಳ್ಳುತ್ತಿದ್ದಾರೆ.ಇತ್ತ ಟೋಲ್ ನಾಕಾದ ಈ ಒಂದು ಟ್ರಾಫಿಕ್ ಜಾಮ್ ನೋಡಿದರೆ ಬೆಂಗಳೂರಿನ ಟ್ರಾಫಿಕ್ ಜಾಮ್ ನೆನಪಾಗುತ್ತದೆ.