ಧಾರವಾಡ –
ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿದ್ದ ಶಿವಪ್ಪ ಜಿ ಹಳ್ಳಿಯವರಿಗೆ ಭಡ್ತಿ ಭಾಗ್ಯ ಸಿಕ್ಕಿದೆ. 1994 ರಲ್ಲಿ ಪೊಲೀಸ್ ಇಲಾಖೆಯ ಸೇವೆಗೆ ಸೇರಿದ ಇವರು ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಹಲವಾರು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಸೇವೆಗೆ ಸೇರಿದ ದಿನದಿಂದ ಈವರೆಗೆ ಪ್ರಾಮಾಣಿಕತೆಯಿಂದ ಕರ್ತವ್ಯಕ್ಕೆ ಇಲಾಖೆಗೆ ಯಾವುದೇ ಕೆಟ್ಟ ಹೆಸರನ್ನು ತರದೇ ಕೆಲಸ ಮಾಡಿದ್ದಾರೆ. ಮುಖ್ಯಪೇದೆಯಾಗಿದ್ದ ಇವರು ನಾಳೆಯಿಂದ ASI ಆಗಲಿದ್ದಾರೆ.

ಹೌದು ಇವರಿಗೆ ಇಲಾಖೆ ಭಡ್ತಿಯನ್ನು ನೀಡಿದ್ದು ನಾಳೆಯಿಂದ ಹೆಗಲ ಮೇಲೊಂದು ಸ್ಟಾರ್ ಹಾಕಿಕೊಂಡು ASI ಆಗಿ ಕೆಲಸ ಮಾಡಲಿದ್ದಾರೆ. ಈಗಾಗಲೇ ಹುಬ್ಬಳ್ಳಿಯ ಕಸಬಾ ಪೇಟೆ ,ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಇತ್ತ ಧಾರವಾಡದ ವಿದ್ಯಾಗಿರಿ,ಶಹರ ಪೊಲೀಸ್ ಠಾಣೆಗಲ್ಲಿ ಕರ್ತವ್ಯ ಮಾಡಿರುವ ಇವರಿಗೆ ಇಲಾಖೆ ಭಡ್ತಿಯನ್ನು ನೀಡಿದ್ದು ASI ಕರ್ತವ್ಯ ಮಾಡಲಿದ್ದಾರೆ. ಭಡ್ತಿ ಸಿಗುತ್ತಿದ್ದಂತೆ ಇತ್ತ ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆಗೆ ASI ಆಗಿ ವರ್ಗಾವಣೆಯಾಗಿದ್ದಾರೆ.

ಇನ್ನೂ ASI ಆಗಿ ಬೇರೆ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿರುವ ಇವರನ್ನು ಧಾರವಾಡದ ಶಹರ ಪೊಲೀಸ್ ಠಾಣೆಯಲ್ಲಿ ಇನಸ್ಪೇಕ್ಟರ್ ಶ್ರೀಧರ ಸತಾರೆ ಸೇರಿದಂತೆ ಸಮಸ್ತ ಪೊಲೀಸ್ ಸಿಬ್ಬಂದಿಗಳು ಶಿವಪ್ಪ ಹಳ್ಳಿಯವರನ್ನು ಸನ್ಮಾನಿಸಿ ಆತ್ಮಿಯತೆಯಿಂದ ಬಿಳ್ಕೋಟ್ಟರು. ಇನ್ನೂ ASI ಆಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ಮಾಡಲಿರುವ ಇವರಿಗೆ ನಮ್ಮಿಂದಲೂ ಒಳ್ಳೇಯದಾಗಲಿ.