ಹುಬ್ಬಳ್ಳಿ ಧಾರವಾಡ –
ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಾರಿಗೆ ನೌಕರರು ರಾಜ್ಯ ಸರ್ಕಾರಕ್ಕೆ ಗಡುವನ್ನು ನೀಡಿದ್ದರು ಗಡುವು ಮುಗಿಯುತ್ತಾ ಬಂದರು ಈವರೆಗೆ ಬೇಡಿಕೆ ಗಳು ಈಡೇರದ ಹಿನ್ನಲೆಯಲ್ಲಿ ಹುಬ್ಬಳ್ಳಿ ಧಾರವಾಡ ದಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿ ದ್ದಾರೆ ಸಾರಿಗೆ ನೌಕರರು.

ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೈಗೆ ಮತ್ತೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡಲಾಗುತ್ತಿದೆ.ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ KSRTC ಸಿಬ್ಬಂದಿಗಳು

ಹುಬ್ಬಳ್ಳಿ ಧಾರವಾಡ ಸೇರಿದಂತೆ ಜಿಲ್ಲೆಯ ವಿವಿಧ ಡಿಪೋ ಗಳಲ್ಲಿ ಕಪ್ಪು ಪಟ್ಟಿ ಧರಿಸಿರುವ ಸಾರಿಗೆ ಸಿಬ್ಬಂದಿ ಎಂದಿನಂತೆ ಡೂಟಿ ಮಾಡತಾ ಇದ್ದಾರೆ

ಬೇಡಿಕೆ ಈಡೇರಿಸುವಂತೆ ಇದೇ ತಿಂಗಳು 7 ನೇ ತಾರೀಖಿನ ವರೆಗೆ ಸರ್ಕಾರಕ್ಕೆ ನೌಕರರು ಗಡುವನ್ನು ನೀಡಿದ್ದರು. ಗಡುವು ಮುಗಿಯುತ್ತಿರುವ ಹಿನ್ನಲೆ ಯಲ್ಲಿ ಈ ಒಂದು ಚಳುವಳಿ ಆರಂಭ ಮಾಡಿದ್ದಾರೆ ಸಾರಿಗೆ ನೌಕರರು

ಈ ಹಿಂದೆ ರಾಜ್ಯದಲ್ಲಿ ಸಾರಿಗೆ ನೌಕರರು ದೊಡ್ಡ ಪ್ರಮಾಣದಲ್ಲಿ ಹೋರಾಟವನ್ನು ಮಾಡಿದ ಸಮಯದಲ್ಲಿ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು ಈವರೆಗೆ ಬೇಡಿಕೆಗಳು ಈಡೇರದ ಹಿನ್ನಲೆಯಲ್ಲಿ ಈ ಒಂದು ನಿರ್ಧಾರಕ್ಕೆ ಬಂದಿದ್ದಾರೆ

ಇಂದಿನಿಂದ 7 ದಿನಗಳ ಕಾಲ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿ ಚಳುವಳಿಯಲ್ಲಿ ಪಾಲ್ಗೊಳ್ಳಲಿ ದ್ದಾರೆ.ಏಳು ದಿನಗಳ ನಂತರ ಮತ್ತೆ ಹೋರಾಟವನ್ನು ಆರಂಭ ಮಾಡತಾರಾ ನೌಕರರು ಎಂಬ ಪ್ರಶ್ನೆ ಕಾಡತಾ ಇದೆ.