ಹುಬ್ಬಳ್ಳಿ ಧಾರವಾಡ –
ಮತ್ತೆ ಹೋರಾಟದ ಹಾದಿ ಹಿಡಿಯುತ್ತಾ ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಸಾರಿಗೆ ನೌಕರರು ಮತ್ತೆ ಪ್ರತಿಭಟನೆಯನ್ನು ಆರಂಭ ಮಾಡಿದ್ದು ಹುಬ್ಬಳ್ಳಿ ಧಾರವಾಡ ಸೇರಿದಂತೆ ಜಿಲ್ಲೆಯಲ್ಲಿ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ.

ಹುಬ್ಬಳ್ಳಿ ಧಾರವಾಡ ಸೇರಿದಂತೆ ಜಿಲ್ಲೆಯಲ್ಲಿ ಕೂಡಾ ಸಾರಿಗೆ ನೌಕರರು ಪ್ರತಿಭಟನೆ ಮಾಡುತ್ತಾ ಬೆಂಬಲ ವನ್ನು ನೀಡಿದ್ದು ಇನ್ನೂ ಇಂದು ಹುಬ್ಬಳ್ಳಿ ಧಾರವಾಡ ದಲ್ಲಿ ಸಾರಿಗೆ ನೌಕರರು ವಿಭಿನ್ನವಾಗಿ ಹೋರಾಟ ವನ್ನು ಮಾಡಿದರು.

ಬಜ್ಜಿ, ಮಿರ್ಚಿ, ಬೋಂಡಾ ಬೇಕಾ ಬನ್ನಿ ಸಾರ್ ಬನ್ನಿ ಎನ್ನುತ್ತಾ ಮಾರಾಟ ಮಾಡುತ್ತಾ ಸಾರಿಗೆ ನೌಕರರು ವಿನೂತನವಾಗಿ ಪ್ರತಿಭಟನೆ ಮಾಡಿದರು.ಸಾರಿಗೆ ನೌಕರರ ಬೇಡಿಕೆ ಈಡೇರಿಸದ ಹಿನ್ನಲೆ ವಿನೂತನ ಪ್ರತಿಭಟನೆ ನಡೆಯುತ್ತಿದೆ. ಬಜ್ಜಿ, ಮಿರ್ಚಿ,ಬೋಂಡಾ ಮಾರುವ ಮೂಲಕ ಪ್ರತಿಭಟನೆ ಮಾಡಲಾಯಿತು.

ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದ ಎದುರು ಹೀಗೆ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು. ಇದೇ ತಿಂಗಳು 7 ರಂದು ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಇಂದಿನಿಂದ ವಿಭಿನ್ನವಾಗಿ ಈ ಒಂದು ಪ್ರತಿಭಟನೆಯನ್ನು ಮಾಡಲಾಯಿತು. ಸೂಕ್ತ ವೇತನ ವಿಲ್ಲದೆ ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತಿದ್ದು ಹೀಗಾಗಿ ಸೌರಿಗೆ ನೌಕರೊಂದಿಗೆ

ಕೈ ಪಕ್ಷದ ಮುಖಂಡ ಪಿ ಎಚ್ ನಿರಲಕೇರಿ , ಶ್ರೀಶೈಲ ಗೌಡ ಕಮತರ, ಸೇರಿದಂತೆ ಹಲವರು ಸಾರಿಗೆ ನೌಕ ರರೊಂದಿಗೆ ಸೇರಿಕೊಂಡು ನಗರದ ಹಲವೆಡೆ ವಸ್ತು ಗಳನ್ನು ಮಾರಾಟ ಮಾಡಿ ತಮ್ಮ ಈ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.