ಹುಬ್ಬಳ್ಳಿ –
ಪೌರ ಕಾರ್ಮಿಕರ ಸಮಸ್ಯೆಗಳ ಕುರಿತು ವಿಧಾನ ಪರಿಷತ್ ನಲ್ಲಿ ಧ್ವನಿ ಎತ್ತಿದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆಯರಿಗೆ ಅಭಿನಂದನೆ ಸಲ್ಲಿಸಲಾಯಿತು. ಪೌರ ಕಾರ್ಮಿಕ ಸಂಘಟನೆಯ ಮುಖಂಡ ವಿಜಯ ಗುಂಟ್ರಾಲ್ ನೇತ್ರತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆಯವರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು.

ನಗರದಲ್ಲಿನ ಅವರ ನಿವಾಸಕ್ಕೇ ವಿಜಯ ಗುಂಟ್ರಾಲ ನೇತ್ರತ್ವದಲ್ಲಿ ತೆರಳಿದ ಪೌರ ಕಾರ್ಮಿಕರು ಸನ್ಮಾನಿಸಿ ಗೌರವಿಸಿದರು. ಹಲವು ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಈ ಹಿಂದೆ ಹುಬ್ಬಳ್ಳಿ ಧಾರವಾಡದಲ್ಲಿ ಪೌರ ಕಾರ್ಮಿಕರು ಹೋರಾಟವನ್ನು ಮಾಡಿದ್ದರು. ಈ ಒಂದು ವಿಚಾರವನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ ಮಾನೆಯವರು ಸದನದಲ್ಲಿ ಪ್ರಶ್ನೆ ಮಾಡಿ ಧ್ವನಿ ಎತ್ತಿದ್ದರು.

ಹೀಗಾಗಿ ನಮ್ಮ ಹೋರಾಟಕ್ಕೇ ನಮ್ಮ ಧ್ವನಿಗೆ ಸ್ಪಂದಿಸಿದ ಇವರಿಗೆ ಇಂದು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಇನ್ನೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಗುತ್ತಿಗೆ ಪೌರಕಾರ್ಮಿಕರ ಧರಣಿ ನಿರತ ಪ್ರತಿಭಟನಾ ಸ್ಥಳಕ್ಕೆ ಶ್ರೀನಿವಾಸ ಮಾನೆಯವರು ಆಗಮಿಸಿ ಹೋರಾಟವನ್ನು ಬೆಂಬಲಿಸಿದ್ದರು.ಅಲ್ಲದೇ ನೇರ ನೇಮಕಾತಿ ನೇರ ವೇತನ ಪಾವತಿ ಕುರಿತು ಸದನದಲ್ಲಿ ಪ್ರಶ್ನೆ ಮಾಡಿ ಹಾಗೂ ಸರಕಾರದ ಆದೇಶವನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಿದ್ದರು. ಈ ಒಂದು ಕಾರಣಕ್ಕಾಗಿ ವಿಧಾನಪರಿಷತ್ ಸದಸ್ಯರಾದ ಶ್ರೀನಿವಾಸ್ ಮಾನೆ ಯವರಿಗೆ ಇಂದು ಪೌರ ಕಾರ್ಮಿಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ವಿಜಯ ಗುಂಟ್ರಾಲ್ ರೊಂದಿಗೆ ಅನಿತಾ ಈನಗೊಂಡ,ಲಕ್ಮೀಾರ ಬಳ್ಳಾರಿ, ಅಶೋಕ ರೋಣ,ರೇಣುಕಾ ಸಾಂಬ್ರಾಣಿ,ಕಲ್ಲವ್ವ ಕಡೇಮನಿ,ಯಲ್ಲವ್ವ ನಿಂಬಕ್ಕನವರ, ತಂಗೆಮ್ಮ ಬೈಣಿ, ಸರೋಜಾ ಬೆಂಗಳೂರು,ನೀಲಮ್ಮ ಮಾದರ,ಲಕ್ಷ್ಮೀ ಪೇರೂರ, ಬಸವರಾಜ ಮಾದರ,