This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ಸಜ್ಜನ ಶಿಕ್ಷಕ ಡಾ.ವಿ.ವಿ.ಹೆಬ್ಬಳ್ಳಿ ಇನ್ನಿಲ್ಲ – ಸೃಜನಶೀಲ ಹಿಂದಿ ಲೇಖಕ ಕನ್ನಡ ಭಾಷಾ ವಿದ್ವಾಂಸ ಅಗಲಿಕೆಗೆ ನಮನ…..

WhatsApp Group Join Now
Telegram Group Join Now

ಧಾರವಾಡ –

ಸೃಜನಶೀಲ ಹಿಂದಿ ಲೇಖಕ ಕನ್ನಡ ಭಾಷಾ ವಿದ್ವಾಂಸ ಡಾ.ವಿ.ವಿ. ಹೆಬ್ಬಳ್ಳಿ(86) ಬೆಳಗ್ಗೆ ನಿಧನರಾದರು.ಅವರು ಪತ್ನಿ,ಲಂಡನ್ ನಲ್ಲಿ ಹಿರಿಯ ವೈದ್ಯರಾಗಿರುವ ಡಾ.ರವಿ ಹೆಬ್ಬಳ್ಳಿ ಸೇರಿದಂತೆ ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.ಹಿಂದಿ-ಕನ್ನಡದ ಕೊಂಡಿಯಾಗಿ ದ್ದರು ಇವರು.ಹೌದು ಡಾ.ವಿ.ವಿ. ಹೆಬ್ಬಳ್ಳಿ ಬಾಲ್ಯದಿಂ ದಲೂ ಸ್ವಾಭಿಮಾನಿಯಾಗಿ ಕಷ್ಟಪಟ್ಟು ಓದಿ ಮೇಲೆ ಬಂದವರು. ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಆರಂಭಗೊಂಡ ಅವರ ಸೇವೆ ಬೆಂಗಳೂರಿನ ಎಸ್.ನಿಜ ಲಿಂಗಪ್ಪ ಕಾಲೇಜು ಪ್ರಾಚಾರ್ಯರಾಗುವ ವರೆಗೂ ಸಾಗಿತು. ಅವರ ಶಿಕ್ಷಣ ಸೇವೆ ನೋಡಿ ಕೆಎಲ್ಇ ಸೊಸೈಟಿ ಅವರನ್ನು ಆಜೀವ ಸದಸ್ಯತ್ವವನ್ನು ನೀಡಿ ಗೌರವಿಸಿತು.

ಕರ್ನಾಟಕ ವಿದ್ಯಾ ವರ್ಧಕ ಸಂಘದ ಕ್ರಿಯಾಶೀಲ ಚಟುವಟಿಕೆ ಗಳಿಗೆ ತೆರೆಯಲ್ಲಿಯೆ ಸಲಹೆ ಸೂಚನೆ ಗಳನ್ನು ನೀಡುತ್ತಿದ್ದ ಅವರು ಡಾ.ಪಾಪು ಅವರ ಒಡನಾಡಿಯಾಗಿದ್ದರು.ಹಿಂದಿ ಯಿಂದ ಕನ್ನಡಕ್ಕೆ ಅನೇಕ ಲೇಖನಗಳನ್ನು ಅನುವಾದಿಸಿ ಪ್ರಕಟಿಸಿ ದ್ದರು.ಕನ್ನಡ ಮತ್ತು ಹಿಂದಿ ಸಾಹಿತ್ಯ ಮತ್ತು ಸಾಹಿತಿ ಗಳ ಮಧ್ಯೆ ಸ್ನೇಹದ ಕೊಂಡಿಯಾಗಿ ಸೇವೆ ಸಲ್ಲಿಸಿದ್ದ ಅವರು ಲಂಡನ್, ಪ್ರಾನ್ಸ್, ಅಮೆರಿಕ ಸೇರಿದಂತೆ ಅನೇಕ ದೇಶಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಂಡಿ ದ್ದರು.


Google News

 

 

WhatsApp Group Join Now
Telegram Group Join Now
Suddi Sante Desk