ಧಾರವಾಡ –
ಧಾರವಾಡದ NTTF ಬಳಿ ಮತ್ತೊಂದು ಅಪಘಾತ ವಾಗಿದೆ. ಟ್ರಕ್ ಮತ್ತು ಬೈಕ್ ನಡುವೆ ಈ ಒಂದು ಅಪಘಾತವಾಗಿದೆ.

ಮೇಲಿಂದ ಮೇಲೆ NTTF ಬಳಿ ಅಪಘಾತಗಳಾಗು ತ್ತಿದ್ದು ಈಗ ಮತ್ತೊಂದು ಅಪಘಾತ ಸಾಕ್ಷಿಯಾಗಿದೆ. ವೇಗವಾಗಿ ಬಂದ ಲಾರಿ ಕ್ರಾಸ್ ಆಗುತ್ತಿದ್ದ ಬೈಕ್ ಗೆ ಡಿಕ್ಕಿಯಾಗಿದೆ.

ಬೈಕ್ ಲಾರಿ ಕೆಳಗೆ ನುಗ್ಗಿದ್ದು ಮುಂದಿನ ಭಾಗ ಹಾಳಾಗಿದ್ದು ಇನ್ನೂ ಇತ್ತ ಬೈಕ್ ಸವಾರನ ತಲೆಗೆ ಗಂಭೀರವಾದ ಗಾಯಗಳಾಗಿದ್ದು ಕೂಡಲೇ ಸ್ಥಳದಲ್ಲಿ ಇದ್ದ ಪೊಲೀಸರು ಮತ್ತು BRTS ಭದ್ರತಾ ಸಿಬ್ಬಂದಿ ಆಸ್ಪತ್ರೆಗೆ ಶಿಪ್ಟ್ ಮಾಡಿದರು

ಇದರಲ್ಲಿ ಲಾರಿ ಚಾಲಕನ ತಪ್ಪುಇದ್ದಿದ್ದು ಇವರ ಅಜಾಗರೂಕತೆಯಿಂದ ಈ ಒಂದು ಅಪಘಾತ ವಾಗಿದೆ.ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ದೂರು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ