ಹುಬ್ಬಳ್ಳಿ –
ಬೈಕ್ ವೊಂದು ಡಿವೈಡರ್ ಗೆ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ತೀವ್ರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಹೊರವಲಯದಲ ಕುಂದಗೋಳ ರಸ್ತೆಯಲ್ಲಿನ ಹೊಸ ಸೇತುವೆ ಬಳಿ ಈ ಒಂದು ಅಪಘಾತ ನಡೆದಿದೆ.

ಹುಬ್ಬಳ್ಳಿಯಿಂದ ಸಂಶಿ ಗ್ರಾಮಕ್ಕೆ ಇಬ್ಬರು ಬೈಕ್ ಸವಾರರು ಹೊರಟಿದ್ದರು. ರಸ್ತೆ ಮಧ್ಯದಲ್ಲಿ ಡಿವೈಡರ್ ಇಡಲಾಗಿತ್ತು.ಇದಕ್ಕೆ ಹೋಗಿ ಇಬ್ಬರು ಬೈಕ್ ಸವಾರರು ಡಿಕ್ಕಿ ಹೊಡೆದಿದ್ದು ಬೈಕ್ ನ ಮುಂದಿನ ಗಾಲಿ ಸಂಪೂರ್ಣವಾಗಿ ಕಟ್ ಆಗಿದೆ.


ಇನ್ನೂ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ತೀವ್ರವಾಗಿ ಗಾಯಗೊಂಡಿದ್ದು ಸ್ಥಳಕ್ಕೆ ಆಗಮಿಸಿದ 112 ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನೂ ನಂತರ ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಪರಿಶೀಲನೆ ಮಾಡಿದರು.

ಇಬ್ಬರು ಸಂಶಿ ಗ್ರಾಮದವರಾಗಿದ್ದಾರೆ.