ಹುಬ್ಬಳ್ಳಿ –
ಶಾರ್ಟ್ ಸರ್ಕ್ಯೂಟ್ ನಿಂದ ಹತ್ತಿಕೊಂಡ ಬೆಂಕಿಯಿಂದ ಎರಡು ಮನೆಗಳು ಬೆಂಕಿಗೆ ಆಹುತಿಯಾದ ಘಟನೆ ಹುಬ್ಬಳ್ಳಿಯ ಸುಳ್ಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಿವಬಸಪ್ಪ ವಾಲಿ ಮತ್ತು ಕಲ್ಲಪ್ಪ ವಾಲಿ ಎಂಬುವರ ಮನೆಯಲ್ಲಿಯೇ ಈ ಒಂದು ಅವಘಡ ನಡೆದಿದೆ. ತಡರಾತ್ರಿ ಮನೆಯಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ.

ಎಲ್ಲರೂ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಪೊನ್ ಕರೆಯೊಂದು ಬಂದಿದೆ.ಯಾರೋ ಪೊನ್ ಮಾಡಿದ್ದಾರೆ ಎಂದುಕೊಂಡು ಮನೆಯಲ್ಲಿ ಮಲಗಿದ್ದ ನಂದಿತಾ ಎದ್ದಿದ್ದಾರೆ.ಅವರ ಮಾವ ಪೊನ್ ಮಾಡಿದ್ದು ಇನ್ನೇನು ಪೊನ್ ನಲ್ಲಿ ಮಾತಾಡಬೇಕು ಎನ್ನುವಷ್ಟರಲ್ಲಿ ಕಣ್ಣು ಮುಂದೆ ಕಾಣಿಸಿಕೊಂಡಿದೆ.
ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದನ್ನು ನೋಡಿದ ನಂದಿತಾ ಕೂಡಲೇ ಎಲ್ಲರನ್ನೂ ಎಬ್ಬಿಸಿದ್ದಾರೆ. ಬೆಂಕಿಯ ಅವತಾರ ನೋಡು ನೋಡುತ್ತಲೆ ಜೋರಾಗಿ ಹತ್ತಿಕೊಂಡಿದೆ.ಕೂಡಲೇ ಎಲ್ಲರೂ ಮನೆಯಿಂದ ಹೊರಗೆ ಬಂದಿದ್ದಾರೆ.

ಇನ್ನೂ ಈ ಒಂದು ಶಾರ್ಟ್ ಸರ್ಕ್ಯೂಟ್ ನಡೆದ ಸುದ್ದಿ ತಿಳಿದ ಗ್ರಾಮದ ಮಂಜುನಾಥ ಬಡಿಗೇರ ಸ್ಥಳಕ್ಕೆ ಆಗಮಿಸಿ ಕೂಡಲೇ ಇದನ್ನು ನೋಡಿದ ಗ್ರಾಮಸ್ಥರು ಮನೆಯಲ್ಲಿದ್ದವರನ್ನು ಹೊರಗೆ ಕರೆದುಕೊಂಡು ಬಂದರು. ನಂತರ ಬೆಂಕಿ ನಂದಿಸುವಷ್ಟರಲ್ಲಿಯೇ ಸಂಪೂರ್ಣವಾಗಿ ಮನೆಯನ್ನು ಆವರಿಸಿಕೊಂಡಿತು ಬೆಂಕಿ. ಎರಡು ಮನೆಗಳಿಗೆ ಹತ್ತಿಕೊಂಡ ಬೆಂಕಿಯಿಂದ ಸುಟ್ಟು ಕರಕಲಾದವು ಮನೆಗಳು.

ಎರಡು ಮನೆಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದು ಯಾವ ವಸ್ತು ಗುರುತು ಸಿಗಲಾರದಷ್ಟು ಸುಟ್ಟು ಕರಕಲಾಗಿವೆ. ಇನ್ನೂ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣ ಮಾಡಿದರು.ಒಟ್ಟಾರೆ ಒಂದು ಪೊನ್ ಕರೆ ಬರಲಿಲ್ಲ ಅಂದರೆ ಎರಡು ಮನೆಗಳಲ್ಲಿನ ಆರು ಜನರು ಸುಟ್ಟು ಕರಕಲಾಗುತ್ತಿದ್ದರು. ಅದೃಷ್ಟ ತುಂಬಾ ತುಂಬಾ ಚನ್ನಾಗಿದ್ದು ಮನೆಯಲ್ಲಿ ಮಲಗಿದ್ದವರ ಪಾಲಿಗೆ ನಂದಿತಾ ಅವರ ಮಾವನ ಪೊನ್ ಕರೆ ಜೀವ ಉಳಿಸಿದೆ.