ಧಾರವಾಡ –
ಮಹಾಮಾರಿ ಕೋವಿಡ್ ಗೆ ಧಾರವಾಡ ಜಿಲ್ಲೆಯಲ್ಲಿ ಮತ್ತೆ ಇಬ್ಬರು ಶಿಕ್ಷಕರು ನಿಧನರಾಗಿದ್ದಾರೆ.ಹೌದು ಕೋವಿಡ್ ಸೋಂಕು ಕಾಣಿಸಿಕೊಂಡು ಕಳೆದ ಹತ್ತು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟವನ್ನು ಮಾಡು ತ್ತಿದ್ದ ಇಬ್ಬರು ಶಿಕ್ಷಕರು ಕೊನೆಗೂ ನಿಧನರಾಗಿದ್ದಾರೆ. ಚಿಕಿತ್ಸೆ ಫಲಿಸದೇ ಇಬ್ಬರು ಶಿಕ್ಷಕರು ನಿಧನರಾಗಿದ್ದಾರೆ
ಹೌದು ಕಲಘಟಗಿ ತಾಲ್ಲೂಕಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಶ ಅಂಗಡಿ ನಿಧನರಾಗಿದ್ದಾರೆ. ಕಳೆದ ಒಂದು ವಾರದಿಂದ ಕಲಘಟಗಿಯ ತಾಲ್ಲೂಕು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟವನ್ನು ಮಾಡುತ್ತಿದ್ದ ಇವರು ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಇಂದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.ಇನ್ನೂ ಇವರ ನಿಧನಕ್ಕೆ ಕಲಘಟಗಿ ತಾಲ್ಲೂಕಿನ ಸಮಸ್ತ ಶಿಕ್ಷಕ ಬಳಗದವರು ಸಂತಾಪ ವನ್ನು ಸೂಚಿಸಿದ್ದಾರೆ.
ಶಾರದಾ ಕಿತ್ತೂರು ಸಹ ಶಿಕ್ಷಕಿ ಅಳ್ನಾವರ ಇವರು ಕೂಡಾ ಕೋವಿಡ್ ಗೆ ಬಲಿಯಾಗಿದ್ದಾರೆ.ಕಳೆದ ಹತ್ತು ದಿನಗಳ ಹಿಂದೆ ಇವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಇವರು ಇಂದು ನಿಧನರಾಗಿದ್ದಾರೆ.ಇನ್ನೂ ಮೃತರಾದ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಜಿಲ್ಲೆಯ ಮತ್ತು ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಭಾವ ಪೂರ್ಣ ಸಂತಾಪವನ್ನು ಸಲ್ಲಿಸಿ ನಮನ ಸಲ್ಲಿಸಿ ದ್ದಾರೆ.
ಶಿಕ್ಷಕ ಬಂಧುಗಳಾದ ಪವಾಡೆಪ್ಪ ಅಶೋಕ ಸಜ್ಜನ ಗುರು ತಿಗಡಿ, ಎಸ್ ಎಫ್ ಪಾಟೀಲ, ಶರಣು ಪೂಜಾರ, ಬಾಬಾಜಾನ ಮುಲ್ಲಾ, ನಂದಕುಮಾರ ದ್ಯಾಪೂರ, ರಾಜೀವಸಿಂಗ ಹಲವಾಯಿ, ಅಕ್ಬರಲಿ ಸೋಲಾಪುರ,ಶಂಕರ ಘಟ್ಟಿ, ಕಾಶಪ್ಪ ದೊಡವಾಡ ಸಿ ಎಂ ಹೂಲಿ,ಎಲ್ ಐ ಲಕ್ಕಮ್ಮನವರ ಮಲ್ಲಿಕಾ ರ್ಜುನ ಉಪ್ಪಿನ, ಹನುಮಂತ ಬೂದಿಹಾಳ, ಚಂದ್ರಶೇಖರ್ ಶೆಟ್ರು, ಶರಣಬಸವ ಬನ್ನಿಗೋಳ, ಆರ್ ನಾರಾಯಣಸ್ವಾಮಿ ಚಿಂತಾಮಣಿ, ಜಿ ಟಿ ಲಕ್ಷ್ಮೀದೇವಮ್ಮ ಎಂ ವಿ ಕುಸುಮ, ವಿ ಎನ್ ಕೀರ್ತಿ ವತಿ, ಜೆ ಟಿ ಮಂಜುಳಾ,ಲತಾ ಎಸ್ ಮುಳ್ಳೂ ರು ಸೇರಿದಂತೆ ಹಲವು ಶಿಕ್ಷಕ ಬಂಧುಗಳು ಅಗಲಿದ ಇಬ್ಬರು ಶಿಕ್ಷಕರಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿ ಕೂಡಲೇ ಮೃತ ಶಿಕ್ಷಕರಿಗೆ ರಾಜ್ಯ ಸರ್ಕಾರ ಸೂಕ್ತವಾದ ಪರಿಹಾರವನ್ನು ನೀಡುವಂತೆ ಒತ್ತಾಯ ವನ್ನು ಮಾಡಿದ್ದಾರೆ.