ಹುಬ್ಬಳ್ಳಿ –
ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿಯ ಕಸಬಾ ಠಾಣೆ ಪೊಲೀಸರು ಬಂಧಿಸಿದ್ದಾರೆ . ದರ್ಶನ ತಂದೆ ಈರಣ್ಣ ಬಿಜವಾಡ ಸಾಃ ಗಂಗಾಧರನಗರ, ಹುಬ್ಬಳ್ಳಿ. ಮತ್ತು ಸಂದೀಪ ತಂದೆ ಸುರೇಶ ಬೆಳ್ಳಿಗಟ್ಟಿ. ಸಾ: ಗಂಗಾಧರನಗರ, ಹುಬ್ಬಳ್ಳಿ ಇವರನ್ನು ಬಂಧಿಸಲಾಗಿದೆ.ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆಯ ಪ್ರಕರಣದಲ್ಲಿ ದಿನಾಂಕ 11/02/2021 ರಂದು ಬಂಧಿಸಿ, ಇವರ ವಶದಿಂದ ದೋಚಿಕೊಂಡು ಹೋಗಿದ್ದ ಒಟ್ಟು 35500/- ಮೌಲ್ಯದ ಒಂದು ಮೊಬೈಲ್ ಪೋನ, ಬೆಳ್ಳಿಚೈನು ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ. ಈ ಮೇಲ್ಕಂಡ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿತರನ್ನು ಬಂಧಿಸಿ, ಅವರ ವಶದಲ್ಲಿದ್ದ ಮೇಲ್ಕಂಡ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಕಸಬಾಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರತನಕುಮಾರ ಜೀರಗ್ಯಾಳ ಹಾಗೂ ತಂಡವು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧ
ಾರವಾಡ ರವರು ಶ್ಲಾಘಿಸಿರುತ್ತಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶ ನದಲ್ಲಿ ಈ ಒಂದು ಕಾರ್ಯಾಚರಣೆ ಯನ್ನು ಮಾಡಲಾಯಿತು. ಇನ್ಸ್ಪೆಕ್ಟರ್ ರತನಕುಮಾರ ಜೀರಗ್ಯಾಳ್ ಮತ್ತು ಸಿಬ್ಬಂದಿ ತಂಡವು ಈ ಕೆಳಕಂಡ ಸುಲಿಗೆಕೋರರನ್ನು ಬಂಧಿಸಿದ್ದಾರೆ.