ಬೆಳಗಾವಿ –
ದೊಣ್ಣೆಗಳಿಂದ ಎರಡು ಕುಟುಂಬಗಳು ಹೊಡೆದಾಟಿದ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಈ ಒಂದು ಗಲಾಟೆ ನಡೆದಿದೆ.

ಇತ್ತೀಚಿಗಷ್ಟೇ ಮುಗಿದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಬ್ಬರು ಗ್ರಾಮದಲ್ಲಿ ಕುಡಿಯುವ ನೀರನ್ನು ಸ್ಥಗಿತ ಮಾಡಿಸಿದ್ದಾರಂತೆ.

ಈ ಒಂದು ವಿಚಾರ ಕುರಿತಂತೆ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಆರಂಭಗೊಂಡ ಗಲಾಟೆ ಗದ್ದಲ ದೊಡ್ಡ ಪ್ರಮಾಣದಲ್ಲಿ ಹಾದಿ ರಂಪಾಟ ಬೀದಿ ರಂಪಾಟವಾಗಿ ಕಂಡು ಬಂದಿತು.
ಎರಡು ಕುಟುಂಬಗಳು ಪರಸ್ಪರ ಹೊಡೆದಾಡಿಕೊಂಡರು. ಕುಡಿಯುವ ನೀರು ಸ್ಥಗಿತಗೊಳಿಸಿದ್ದ ಸೋತ ಅಭ್ಯರ್ಥಿಯನ್ನು ಪ್ರಶ್ನೆ ಮಾಡಿದ್ದಕ್ಕಾಗಿ ಗಲಾಟೆ ನಡೆದಿದೆ.
ಗ್ರಾಮ ಪಂಚಾಯತಿಯ ಚುನಾವಣೆಯಲ್ಲಿನ ಹಳೇ ವೈಷಮ್ಯದಿಂದಾಗಿ ಈ ಒಂದು ಗಲಾಟೆ ನಡಿದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ನಾರಿಯರು ಕೈಯಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಹೊಡೆದಾಡಿದ್ದಾರೆ.

ನಾರಿಯರ ನಡುವೆ ಈ ಒಂದು ಹೊಡೆದಾಟ ನಡೆದಿದ್ದು ಇವರೊಂದಿಗೆ ಎರಡು ಕುಟುಂಬದವರಿಗೆ ಅವರವರ ಬೆಂಬಲಿಗರು ಸೇರಿದಂತೆ ಹಲವರು ಅಖಾಡಕ್ಕೆ ಇಳಿದು ಕೈಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಬಳಸಿ ಹೊಡೆದಾಡಿದ್ದಾರೆ.ಸಧ್ಯ ಈ ಒಂದು ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.