ಚಿಕ್ಕಮಗಳೂರು –
ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಸಿ. ಮಂಜುನಾಥ್,ಸಹಾಯಕ ಎಂಜಿನಿಯರ್ ಎಸ್. ಚಿದಾನಂದ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ)ಪೊಲೀಸರ ಬಲೆಗೆ ಬಿದ್ದಿದ್ದಾರೆ.ಹೌದು
ತಾಲ್ಲೂಕಿನ ಹಾಂದಿಯಲ್ಲಿ ವಿದ್ಯುತ್ ಗುತ್ತಿಗೆದಾರನಿಂದ 7 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.

ಎಸಿಬಿ ಡಿಎಸ್‌ಪಿ ಸುನಿಲ್,ಇನ್ಸ್ಪೆಕ್ಟರ್ ಅನಿಲ್ ರಾಥೋಡ್ ಅವರು ಇಬ್ಬರನ್ನು ಬಂಧಿಸಿ ಲಂಚದ ಹಣ ವಶಕ್ಕೆ ಪಡೆದಿ ದ್ದಾರೆ.ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ವಿದ್ಯುತ್ ಮಾರ್ಗ ಸಮೀಕ್ಷೆಗೆ ಈ ಎಂಜಿನಿಯರ್‌ಗಳು ₹ 12 ಸಾವಿರ ಲಂಚ ಬೇಡಿಕೆ ಇಟ್ಟಿದ್ದಾರೆ ಎಂದು ಮೂಡಿಗೆ ರೆಯ ವಿದ್ಯುತ್ ಗುತ್ತಿಗೆದಾರ ಅಭಿಲಾಷ್ ದೂರು ನೀಡಿ ದ್ದರು ಎಂದು ಪೊಲೀಸರು ತಿಳಿಸಿದ್ದಾರೆ.