ಚಾಮರಾಜನಗರ –
ಅಂಗಡಿ ಮಾಲಿಕರೊಬ್ಬರಿಂದ ಜಿಎಸ್ ಟಿ ಹಣವನ್ನು ಲಂಚವಾಗಿ ಪಡೆಯುವ ವೇಳೆ ಇಬ್ಬರು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ. ಚಾಮ ರಾಜನಗರದ ವಾಣಿಜ್ಯ ತೆರಿಗೆ ಇನ್ಸ್ಪೆಕ್ಟರ್ ಗಳಾದ ರವಿ ಕುಮಾರ್ ಮತ್ತು ಅವಿನಾಶ್ ಸಿಕ್ಕಿಬಿದ್ದ ಅಧಿಕಾರಿಗಳಾಗಿ ದ್ದಾರೆ. ಚಾಮರಾಜನಗರ ತಾಲೂಕಿನ ನಾಗವಳ್ಳಿ ಆಟೋ ಪಾರ್ಟ್ಸ್ ಅಂಗಡಿ ಮಾಲೀಕ ತೌಸಿಫ್ ಎಂಬುವರಿಗೆ ಸರ್ಕಾರಕ್ಕೆ ಸಲ್ಲಬೇಕಾದ ಜಿಎಸ್ ಟಿ ಹಣ ಕಟ್ಟದೆ ತಮಗೆ ಹಣ ನೀಡುವಂತೆ ಈ ಅಧಿಕಾರಿಗಳು ಹೇಳಿದ್ದರು.
ಒಟ್ಟು 7 ಸಾವಿರ ರೂಪಾಯಿ ಲಂಚ ಪಡೆದುಕೊಂಡು ಪರಸ್ಪರ ಹಂಚಿಕೆ ಮಾಡಿಕೊಂಡಿದ್ದರು.ರವಿಕುಮಾರ್ ಬಳಿ 2 ಸಾವಿರ ರೂ ಪತ್ತೆಯಾದರೆ ಅವಿನಾಶ್ ಬಳಿ 5 ಸಾವಿರ ರೂ ಪತ್ತೆಯಾಗಿದೆ ಇಬ್ಬರನ್ನೂ ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.