ಧಾರವಾಡ –
ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒರ್ವ ಸ್ಥಳದಲ್ಲೇ ಸಾವಿಗೀಡಾದ ಘಟನೆ ಧಾರವಾಡದಲ್ಲಿ ನಡೆದಿದೆ.

ಹೌದು ನಗರದ old DSP ಸರ್ಕಲ್ ನಲ್ಲಿ ಈ ಒಂದು ಘಟನೆ ನಡೆದಿದೆ.ವೇಗವಾಗಿ ಬಂದ ಎರಡು ಲಾರಿಗಳು ನಿಯಂತ್ರಣ ತಪ್ಪಿ ಪರಸ್ಪರವಾಗಿ ಡಿಕ್ಕಿ ಯಾಗಿದ್ದು ಡಿಕ್ಕಿಯಾದ ರಭಸಕ್ಕೆ ಎರಡು ಲಾರಿಗಳು ಪಲ್ಟಿಯಾಗಿ ಬಿದ್ದಿವೆ

ಒಂದು ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಮತ್ತೊಂದು ಈರುಳ್ಳಿ ತುಂಬಿದ ಲಾರಿ ತುಂಬಾ ತುಂಬಾ ವೇಗವಾಗಿದ್ದ ಎರಡು ಲಾರಿಗಳ ಚಾಲಕರು ನಿಯಂತ್ರಣ ಕಳೆದುಕೊಂಡು ಮುಖಾಮುಖಿ ಯಾಗಿ ಡಿಕ್ಕಿಯಾಗಿವೆ

ಇನ್ನೂ ಘಟನೆ ಯಲ್ಲಿ ಗ್ಯಾಸ್ ಲಾರಿ ಚಾಲಕ ನಿಧನ ರಾಗಿದ್ದಾರೆ. ಇತ್ತ ಈ ಒಂದು ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಇನ್ನೂ ಪ್ರಮುಖವಾಗಿ ಸಿಲಿಂಡರ್ ತುಂಬಿದ ಲಾರಿ ಒಂದು ಇದೆ ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಅವ ಘಡವೊಂದು ತಪ್ಪಿದಂತಾಗಿದೆ ಸಧ್ಯ ಈ ಒಂದು ಕುರಿತು ಧಾರವಾಡ ಸಂಚಾರಿ ಪೊಲೀಸರು ದೂರು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ