ಹುಬ್ಬಳ್ಳಿ ಧಾರವಾಡ –
ಬೈಕ್ ಮತ್ತು ಲಾರಿ ನಡುವೆ ಡಿಕ್ಕಿ ಆದ ಪರಿಣಾಮ, ಬೈಕ್ ಸವಾರ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಧಾರವಾಡ ಬೈಪಾಸ್ ಬಳಿ ಇರುವ, ಸ್ಮಾಲ್ ಬ್ರಿಜ್ ಬಳಿ ನಡೆದಿದೆ.ಮಳೆ ಹೆಚ್ಚಾಗಿ ಬರುತ್ತಿರುವ ಕಾರಣ ದಿಂದ ಈ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.

ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ನನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಉತ್ತರ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.ಇನ್ನು ಒಂದೇ ದಿನದಲ್ಲಿ ಎರಡು ಅಪಘಾತಗಳು ನಡೆದಿದ್ದು ಹುಬ್ಬಳ್ಳಿ ಜನರಲ್ಲಿ ಆತಂಕ ಮೂಡಿಸಿದೆ.

ಇನ್ನೂ ಇತ್ತ ಧಾರವಾಡದಲ್ಲಿ ಕೂಡಾ ಬೈಕ್ ವೊಂದು ಅಪಘಾತ ವಾಗಿದ್ದು ಒರ್ವ ಸಾವಿಗೀಡಾಗಿದ್ದಾನೆ. ಧಾರವಾಡ ಹೊರವಲಯದ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಅಪಘಾತ ಆಗಿದೆ

ಶಿಲ್ಪಾ ಮೆಡಿಕಲ್ ಕಂಪನಿಯ ದೇವಾ ಮಲ್ಲೇಶ್ವ ರಯ್ಯ ಎಂಬುವರೇ ಮೃತರಾಗಿದ್ದಾರೆ.ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ ನಂತರ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದರು
